ಡಿ.7; ಬಂಟ್ವಾಳದಲ್ಲಿ ದಾನಿ ಅರ್ಜುನ್ ಭಂಡಾರ್ಕರ್ ಗೆ ಹುಟ್ಟೂರ ಸನ್ಮಾನ
Thursday, December 04, 2025
ಕಳೆದ 6 ವರ್ಷಗಳಿಂದ 1700 ಅಧಿಕ ಕುಟುಂಬಗಳಿಗೆ ಸುಮಾರು 9 ಕೋಟಿ ಮೊತ್ತವನ್ನು ದಾನಿಗಳ ಸಹಕಾರದಿಂದ ನೀಡಿದ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅರ್ಜುನ್ ಭಂಡಾರ್ಕರ್ ಇವರಿಗೆ ಡಿ.7ರಂದು ಹುಟ್ಟೂರ ಸನ್ಮಾನವನ್ನು ಬಂಟ್ವಾಳದ ಸ್ವರ್ಣಸಭಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಸೇವಾಸಂಸ್ಥೆಗಳ ಸಹಭಾಗಿತ್ವದಲ್ಲಿ ಹುಟ್ಟೂರ ಅಭಿನಂದನಾ ಸಮಿತಿ ವತಿಯಿಂದ ಹುಟ್ಟೂರ ಸನ್ಮಾನ , ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ ಡಿ. 7ರಂದು ಬೆಳಿಗ್ಗೆ 9ರಿಂದ 10.30ರವರೆಗೆ ಬಂಟ್ವಾಳ ರಾಜಸೌಧ ಸ್ವರ್ಣಸಭಾ ಸಭಾಂಗಣದಲ್ಲಿ ನಡೆಯಲಿದೆ ಎಂದು ಅಭಿನಂದನಾ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.

.jpeg)