ಕಾರ್ಕಳ ಉಪವಿಭಾಗದ ಎಎಸ್ಪಿ ಹರ್ಷ ಪ್ರಿಯಂವದ ಸಿಐಡಿ ಎಸ್ಪಿಯಾಗಿ ಮುಂಬಡ್ತಿ
Wednesday, December 31, 2025
ಕಾರ್ಕಳ ಉಪ ವಿಭಾಗದ ಎಎಸ್ಪಿಯಾಗಿದ್ದ ಹರ್ಷ ಪ್ರಿಯಾಂವದ ಅವರಿಗೆ ಸಿಐಡಿ ಎಸ್ಪಿಯಾಗಿ ಮುಂಬಡ್ತಿ ನೀಡಲಾಗಿದೆ.
ಜಾರ್ಖಂಡ್ ಮೂಲದ ಹರ್ಷ ಪ್ರಿಯಂವದ ಅವರು 2020ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ 165ನೇ ರ್‍ಯಾಂಕ್ ಪಡೆದಿದ್ದರು. ಇವರು ಎಂಬಿಬಿಎಸ್ ಪದವೀಧರೆಯೂ ಹೌದು. 2025ರ ಫೆಬ್ರವರಿಯಲ್ಲಿ ಕಾರ್ಕಳ ಉಪ ವಿಭಾಗದ ಎಎಸ್ಪಿ ಯಾಗಿ ಹರ್ಷ ಪ್ರಿಯಂವದ ಅವರನ್ನು ನೇಮಕಗೊಳಿಸಿ ಸರ್ಕಾರ ಅದೇಶಿಸಿತ್ತು. ಇದೀಗ ಮುಂಬಡ್ತಿ ದೊರಕಿದ್ದು, ಸಿಐಡಿ ಎಸ್ಪಿ ಆಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ