ಕುಂದಾಪುರ ಬೆಂಕಿ ಅವಘಡ; ಅಕ್ರಮ ಪಟಾಕಿ ದಾಸ್ತಾನು ಇರಿಸಿದ್ದ ಗಣೇಶ್ ಭಟ್ ವಿರುದ್ಧ ಪ್ರಕರಣ
ಕುಂದಾಪುರದ ವೆಂಕಟರಮಣ ದೇವಸ್ಥಾನದ ಎದುರಿನ ಮಳಿಗೆಯಲ್ಲಿ ಬೆಂಕಿ ಅವಘಡ ಸಂಭವಿಸಿ ಹಲವು ಅಂಗಡಿಗಳು ಭಸ್ಮಗೊಂಡ ಪ್ರಕರಣಕ್ಕೆ ಸಂಬಂಧಿಸಿ ಅನಧಿಕೃತವಾಗಿ ಪಟಾಕಿ ದಾಸ್ತಾನು ಇರಿಸಿದ ಗಣೇಶ್ ಭಟ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಬಾಲಾಜಿ ಪ್ರಾವಿಜನ್ ಸ್ಟೋರ್ ನ ಮೇಲಿನ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡು ನಂತರ ಆ ಬೆಂಕಿಯು ಇತರ ಅಂಗಡಿಗಳಾದ ದಾಮೋದರ್ ಪ್ರಾವಿಜನ್ ಸ್ಟೋರ್, ಜನಾರ್ಧನ ಭಟ್ ಆಂಡ್ ಸನ್ಸ, ಮಧುರಾ ಎಲೆಕ್ಕ್ರಾನಿಕ್ಸ ಅಂಗಡಿಗಳಿಗೆ ಬೆಂಕಿ ಆವರಿಸಿಕೊಂಡಿತ್ತು. ಘಟನೆಯಲ್ಲಿ ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗಿತ್ತು. ಈ ಬಗ್ಗೆ ಬಾಲಾಜಿ ಪ್ರಾವಿಷನ್ ಸ್ಟೋರ್ ಮಾಲಕ ಗಣೇಶ್ ನಾಯಕ್ ಕುಂದಾಪುರ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ಕುರಿತು ತನಿಖೆ ನಡೆಸಿದ ಪೊಲೀಸರಿಗೆ ಅವಘಡ ಸಂಭವಿಸಿದ ಕಟ್ಟಡದಲ್ಲಿ ಅಕ್ರಮವಾಗಿ ಪಟಾಕಿ ದಾಸ್ತಾನು ಇರಿಸಿರುವುದು ಬೆಳಕಿಗೆ ಬಂದಿದೆ. ಗಣೇಶ್ ಭಟ್ ಎಂಬವರು 2024 ರಿಂದ 2029ರ ವರೆಗೆ ಪರವಾನಿಗೆ ನವೀಕರಿಸಿದ್ದು, ಆದರೆ ದಿನಾಂಕ 2025ರ ಡಿ. 16ರಂದು ಮಾನ್ಯ ಜಿಲ್ಲಾಧಿಕಾರಿಯವರು ಲೈಸೆನ್‌ನ್ನು ರದ್ದು ಪಡಿಸಿರುವುದು ಕಂಡು ಬಂದಿದೆ.
ಅನದಿಕೃತವಾಗಿ ಸುಮಾರು 3,08,252.50 ರೂಪಾಯಿ ಮೌಲ್ಯದ ಪಟಾಕಿಯನ್ನು ದಾಸ್ತಾನು ಇಟ್ಟುಕೊಂಡಿರುವುದರಿಂದ ಗಣೇಶ್ ಭಟ್ ವಿರುಧ್ದ ಕುಂದಾಪುರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 150/2025 ಕಲಂ: 288 BNS 9(B)(1)(b) Explosive Actರಂತೆ ಪ್ರಕರಣ ದಾಖಲಾಗಿದೆ.