ಜ.14: ಉಡುಪಿ ರೈಲ್ವೇ ಪ್ಲಾಟ್‌ಫಾರ್ಮ್ ಸರ್ಫೇಸಿಂಗ್, ಓವರ್ ಬ್ರಿಡ್ಜ್ ಶೆಲ್ಟರ್ ಉದ್ಘಾಟನೆ
Tuesday, January 13, 2026
ಕೊಂಕಣ ರೈಲ್ವೇ ಕಾರ್ಪೋರೇಶನ್ ಲಿಮಿಟೆಡ್ ವತಿಯಿಂದ ಉಡುಪಿ ರೈಲ್ವೇ ನಿಲ್ದಾಣದಲ್ಲಿ ನಿರ್ಮಾಣಗೊಂಡಿರುವ ಪ್ಲಾಟ್ ಫಾರ್ಮ್ ಸರ್ಫೇಸಿಂಗ್, ಪ್ಲಾಟ್ ಫಾರ್ಮ್ ಶೆಲ್ಟರ್ ಹಾಗೂ ಫುಟ್ ಓವರ್ ಬ್ರಿಡ್ಜ್ ಶೆಲ್ಟರ್ ಉದ್ಘಾಟನಾ ಸಮಾರಂಭವು ಜ. 15ರಂದು ನಡೆಯಲಿದೆ.
ಬೆಳಗ್ಗೆ 10.30ಕ್ಕೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದಾರೆ. ಕೊಂಕಣ ರೈಲ್ವೇ ಕಾರ್ಪೋರೇಶನ್ ಲಿಮಿಟೆಡ್ ಮ್ಯಾನೇಜಿಂಗ್ ಡೈರೆಕ್ಟರ್ ಸಂತೋಷ್ ಕುಮಾರ್ ಝಾ ಅಧ್ಯಕ್ಷತೆ ವಹಿಸಲಿದ್ದಾರೆ. ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಕೊಂಕಣ್ ರೈಲ್ವೇ ಇದರ ವಿಭಾಗೀಯ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.