ಅತ್ತೂರು ಜಾತ್ರೆ ಹಿನ್ನೆಲೆ: ಜ.18ರಂದು ನಿಟ್ಟೆ ಗ್ರಾ.ಪಂ. ಮಳಿಗೆಗಳ ಸೈಟ್ ಏಲಂ ಪ್ರಕ್ರಿಯೆ
ಐತಿಹಾಸಿಕ ಹಿನ್ನಲೆಯುಳ್ಳ ಅತ್ತೂರು ಸಂತ ಲಾರೆನ್ಸ್ ಬಸಿಲಿಕ ಮಹೋತ್ಸವದ ಪ್ರಯುಕ್ತ ಜ.18ರಂದು ನಿಟ್ಟೆ ಗ್ರಾಮ ಪಂಚಾಯತ್ ಮಳಿಗೆಗಳ ಸೈಟ್ ಏಲಂ ಪ್ರಕ್ರಿಯೆ ನಡೆಸಲಿದೆ.
ನಿಟ್ಟೆ ಗ್ರಾಮದ ಅತ್ತೂರು ಸೈಂಟ್ ಲಾರೆನ್ಸ್ ಇಗರ್ಜಿಯಲ್ಲಿ ಜ. 25ರಿಂದ ಜ.29ರವರೆಗೆ ಜಾತ್ರಮಹೋತ್ಸವ ನಡೆಯಲಿದೆ. ಆ ಪ್ರಯುಕ್ತವಾಗಿ ಅತ್ತೂರು ಚರ್ಚ್ ಎದುರುಗಡೆ ದ್ವಿಪಥ ರಸ್ತೆಯ ಅಂಚಿನಲ್ಲಿ ಪಂಚಾಯತ್ ನಿಗದಿಪಡಿಸಿದ 10 ಫೀಟ್ ಅಗಲದ ಸೈಟ್ ಗಳಲ್ಲಿ ತಾತ್ಕಾಲಿಕವಾಗಿ ಐದು ದಿನಗಳ ಕಾಲ ಪಂಚಾಯತ್ ನಿಗದಿಪಡಿಸಿದ ದರದಲ್ಲಿ ವ್ಯಾಪಾರ ಮಾಡುವ ಹಕ್ಕನ್ನು ಸೀಲ್ಡ್ ಟೆಂಡರು ಮುಖಾಂತರ ನೀಡಲಾಗುವುದು.
ನಿಟ್ಟೆ ಪಂಚಾಯತ್ ನಿಂದ ಒದಗಿಸಿದ ಫಾರ್ಮನ್ನು ಕ್ರಮ ಪ್ರಕಾರ ತುಂಬಿಸಿ 100 ರೂಪಾಯಿಯ ಠೇವಣಿ ರಶೀದಿಯೊಂದಿಗೆ, ಆಧಾರ್ ಕಾರ್ಡ್ ಜೆರಾಕ್ಸ್ ಕವರಿನಲ್ಲಿ ಹಾಕಿ ಬಂದ್ ಮಾಡಿ ಕವರಿನ ಮೇಲೆ ಸೈಟ್ ನಂಬ್ರ ಮತ್ತು ವಿಳಾಸ ನಮೂದಿಸಬೇಕು.
ಕವರನ್ನು ಜ.18 ರಂದು ಅತ್ತೂರು ಸೈಂಟ್ ಲಾರೆನ್ಸ್ ಶಾಲಾ ಸಭಾಭವನದಲ್ಲಿ ಬೆಳಿಗ್ಗೆ 9 ರಿಂದ 12 ಗಂಟೆ ತನಕ ಟೆಂಡರು ಕವರುಗಳನ್ನು ಸ್ವೀಕರಿಸಲಾಗುವುದು.
ಜ.18 ರಂದು ನಂತರ ಹಾಜರಿದ್ದ ಬಿಡ್ಡುದಾರರ ಸಮಕ್ಷಮ ಕವರನ್ನು ತೆರೆಯಲಾಗುವುದು. ಟೆಂಡರು ಪಾಸಾದವರು ಟೆಂಡರಿನಲ್ಲಿ ಕಾಣಿಸಿದ 5,100 ಲೈಸನ್ಸ್ ಫೀಸ್ ಕೂಡಲೇ ಪಾವತಿಸುವುದು. ಕಟ್ಟಿದ ಠೇವಣಿ 5,100 ಹಿಂತಿರುಗಿಸುವುದಿಲ್ಲ. ಏಲಂ ಖಾಯಂ ಆದವರು ಟೆಂಡರ್ ಮೊತ್ತವನ್ನು ಸ್ಥಳದಲ್ಲಿ ಉಪಸ್ಥಿತಿಯಲ್ಲಿರುವ ಬ್ಯಾಂಕ್ ಆಫ್ ಬರೋಡ ಬ್ಯಾಂಕ್ ನಲ್ಲಿರುವ ಕ್ಯೂ ಆರ್ ಕೋಡ್ ಮೂಲಕ ಪಂಚಾಯತ್ ಖಾತೆಗೆ ಜಮೆ ಮಾಡುವುದು.
ಗ್ರಾಮ ಪಂಚಾಯತ್ ನಿOದ ನಿಗದಿ ಪಡಿಸಿದ ಮೊತ್ತಕ್ಕಿಂತ ಕಡಿಮೆ ಮೊತ್ತಕ್ಕೆ ಟೆಂಡರು ಬಂದಲ್ಲಿ ಟೆಂಡರ್ ಮಾಡಲಾಗುವುದಿಲ್ಲ. ಟೆಂಡರನ್ನು ಖಾಯಂ ಮಾಡುವ ಅಥವಾ ಯಾವೊಂದೂ ಕಾರಣ ಕೊಡದೇ ತಿರಸ್ಕರಿಸುವ ಹಕ್ಕು ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಕಾಯ್ದಿರಿಸಿಕೊಂಡಿರುತ್ತಾರೆ.
ವಹಿಸಿಕೊOಡ ಸೈಟುಗಳಲ್ಲಿ ಮಿಠಾಯಿ, ಕಲ್ಲಂಗಡಿ ಹಾಗೂ ಇತರ ವಸ್ತುಗಳನ್ನು ತೆರೆದಿಟ್ಟು ವ್ಯಾಪಾರ ಮಾಡುವರೇ ಅವಕಾಶ ಇರುವುದಿಲ್ಲ. ಅದೇ ರೀತಿ ಶರಾಬು ವ್ಯಾಪಾರ ಹಾಗೂ ಜೂಜಾಟದ ವ್ಯಾಪಾರ ಮಾಡುವ ಅವಕಾಶ ಇರುವುದಿಲ್ಲ. ಅಂಗಡಿಯಲ್ಲಿ ಮೈಕ್ ಇಟ್ಟು ಪ್ರಚಾರ ಮಾಡಲು ಅವಕಾಶ ಇಲ್ಲಾ.
ಸೈಟುಗಳಲ್ಲಿ ಗುರುತು ನಂಬ್ರಗಳನ್ನು ಹಾಕಿದ್ದು ಅದಕ್ಕಿಂತ ಹೊರಗೆ ಚಪ್ಪರ ಹಾಕುವುದಾಗಲೀ, ಡಬ್ಬಿ ಪೆಟ್ಟಿಗೆ ಇತ್ಯಾದಿಗಳನ್ನು ಇಡಲು ಅವಕಾಶ ಇಲ್ಲ. ಇದಕ್ಕೆ ವಿರೋಧವಾಗಿ ಇಟ್ಟಲ್ಲಿ ಪೊಲೀಸರು ಯಾವುದೇ ಕಾರ್ಯಾಚರಣೆ ಮಾಡಿದ್ದಲ್ಲಿ ಗ್ರಾಮ ಪಂಚಾಯತ್ ಜವಾಬ್ದಾರರಾಗುವುದಿಲ್ಲ . ಆರೋಗ್ಯ ದೃಷ್ಟಿಯಿಂದ ಆರೋಗ್ಯ ಇಲಾಖೆಯವರು ನೀಡುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು. ಹೆಚ್ಚಿನ ಮೊತ್ತ ನಮೂದಿಸಿದವರು ಆ ಕೂಡಲೇ ಹಣ ಪಾವತಿ ಮಾಡದಿದ್ದಲ್ಲಿ 2 ನೇ ಯವರಿಗೆ ಸೈಟನ್ನು ನೀಡಲಾಗುವುದು.
ಏಲಂನಲ್ಲಿ ಸೈಟ್ ಖಾಯಂ ಆದವರು ಸ್ಥಳದಲ್ಲಿ ಬ್ಯಾಂಕ್ ಖಾತೆಗೆ 100 ರೂಪಾಯಿ ಹಣ ಜಮೆ ಮಾಡುವುದು ಹಾಗೂ ಮೇಲ್ಪಟ್ಟ ನೋಟುಗಳನ್ನು ಸಂದಾಯ ಮಾಡುವುದು 10, 20, 50 ರ ನೋಟುಗಳನ್ನು ಎಣಿಕೆ ಮಾಡಲು ತುಂಬಾ ಸಮಯ ವ್ಯರ್ಥವಾಗುವುದರಿಂದ ಹಾಗೂ ಮುಂದಿನ ಏಲಂ ಮಾಡಲು ತೊಂದರೆಯಾಗುವುದರಿOದ 100 ರೂ ಮೇಲ್ಪಟ್ಟ ನೋಟುಗಳನ್ನು ಮಾತ್ರ ಸ್ವೀಕರಿಸಲಾಗುವುದು.
ಟೆಂಡರ್ ಮುಖಾಂತರ ಸೈಟ್‌ನ್ನು ಪಡೆಯದೇ ಅಂಗಡಿ ಮಳಿಗೆಗಳನ್ನು ಹಾಕಿದಲ್ಲಿ ಅವರಿಗೆ 10000 ದಂಡ ವಿಧಿಸಲಾಗುವುದು ಹಾಗೂ ಖಾಸಗಿ ಜಮೀನಿನಲ್ಲಿ ಅಂಗಡಿ ಮಳಿಗೆಗಳನ್ನು ಹಾಕಿದಲ್ಲಿ 2,10,000 ದಂಡನೆಯನ್ನು ವಿಧಿಸಲಾಗುವುದು ಹಾಗೂ ಖಾಸಗಿ ಜಮೀನಿನಲ್ಲಿ ಅಂಗಡಿ ಮಳಿಗೆಗಳನ್ನು ಹಾಕಿದಲ್ಲಿ ಜಮೀನಿನ ಮಾಲಕರು ಕಡ್ಡಾಯವಾಗಿ ಗ್ರಾಮ ಪಂಚಾಯತ್ ನಿಂದ ಪರವಾನಿಗೆಯನ್ನು ಪಡೆದು ವ್ಯಾಪಾರ ಮಾಡತಕ್ಕದ್ದು.
ಹಸಿ ಕಸ ಮತ್ತು ಒಣಕಸವನ್ನು ಪ್ರತೇಕ ಮಾಡಿ ಇಡಬೇಕೆಂಬ ನಿಯಮಾನುಸಾರವು ಏಲಂ ಪ್ರಕ್ರಿಯೆಯಲ್ಲಿ ಇದೆ ಎಂದು ನಿಟ್ಟೆ ಗ್ರಾಮ ಪಂಚಾಯತ್ ಅಧ್ಯಕ್ಷರು/ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಾಹಿತಿ ನೀಡಿದ್ದಾರೆ.