ವಿಶ್ವ ಪ್ರಭಾ ಪುರಸ್ಕಾರ 2026 ಪ್ರಶಸ್ತಿಗೆ ಶಿಕ್ಷಣ ತಜ್ಞ ಅಶೋಕ್ ಕಾಮತ್ ಆಯ್ಕೆ
Monday, January 05, 2026
ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಇವರ ವತಿಯಿಂದ ವಿಶ್ವ ಪ್ರಭಾ ಪುರಸ್ಕಾರ 2026 ಪ್ರಶಸ್ತಿಗೆ ಶಿಕ್ಷಣ ತಜ್ಞ ಅಶೋಕ್ ಕಾಮತ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಸಂಚಾಲಕ ರವಿರಾಜ್ ಹೆಚ್.ಪಿ ಹೇಳಿದರು.
ಅವರು ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಜ.26ರಂದು ಉಡುಪಿ ಯಕ್ಷಗಾನ ಕಲರಂಗದ ಐವೈಸಿ ಸಭಾಂಗಣದಲ್ಲಿ ನಡೆಯುವ ಸಂಸ್ಕೃತಿ ಉತ್ಸವದಲ್ಲಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದು.
ಈ ಪುರಸ್ಕಾರವು ಪ್ರಶಸ್ತಿ ಪತ್ರ, ಫಲಕ ಹಾಗೂ 1 ಲಕ್ಷ ಗೌರವ ಧನವನ್ನು ಒಳಗೊಂಡಿದೆ. ಎಂದರು. ಡಾ. ಅಶೋಕ್ ಕಾಮತ್ ಅವರು, ಶಿಕ್ಷಕರಾಗಿ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕರಾಗಿ ಹಲವಾರು ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಇದರ ಸ್ಥಾಪಕಾಧ್ಯಕ್ಷ ವಿಶ್ವನಾಥ ಶೆಣೈ, ಅಧ್ಯಕ್ಷ ಪ್ರೊ. ಶಂಕರ್, ಸಂಸ್ಥೆಯ ಪೋಷಕರಾದ ಡಾ. ಹರೀಶ್ಚಂದ್ರ, ಉಪಾಧ್ಯಕ್ಷೆ ಸಂಧ್ಯಾ ಶೆಣೈ ಉಪಸ್ಥಿತರಿದ್ದರು.
