-->
 ತಾಂತ್ರಿಕ ದೋಷ: ಇಸ್ರೋದ ಪಿಎಸ್‌ಎಲ್‌ವಿ-ಸಿ62 ಮಿಷನ್ ಉಡಾವಣೆ ವಿಫಲ

ತಾಂತ್ರಿಕ ದೋಷ: ಇಸ್ರೋದ ಪಿಎಸ್‌ಎಲ್‌ವಿ-ಸಿ62 ಮಿಷನ್ ಉಡಾವಣೆ ವಿಫಲ


ಶ್ರೀಹರಿಕೋಟಾದಿಂದ ಇಂದು (ಜನವರಿ 12) ಅದ್ಭುತ ಉಡಾವಣೆಯೊಂದಿಗೆ ಹೊರಟಿದ್ದ ಇಸ್ರೋದ ಪಿಎಸ್‌ಎಲ್‌ವಿ-ಸಿ62 ಮಿಷನ್ ವಿಫಲವಾಗಿದೆ. ಪಿಎಸ್‌ಎಲ್‌ವಿ-ಸಿ62 ಮಿಷನ್ ಇಸ್ರೋ ಶ್ರೀಹರಿಕೋಟಾದಿಂದ ಉಡಾವಣೆಗೊಂಡಿತು. ಆದರೆ, ಕೊನೆಯ ಹಂತದಲ್ಲಿ ಸಮಸ್ಯೆಗಳು ಕಂಡುಬಂದಿದ್ದು ರಾಕೆಟ್ ನಾಪತ್ತೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.  

ಈ ಬಗ್ಗೆ ಪ್ರತಿಕ್ರಿಯಿಸಿರುವ ಇಸ್ರೋ ಅಧ್ಯಕ್ಷ ವಿ. ನಾರಾಯಣ್, ಇಂದು ನಾವು ಪಿಎಸ್‌ಎಲ್‌ವಿ ಸಿ-62 ಮಿಷನನ್ನು ಪ್ರಯತ್ನಿಸಿದ್ದೇವೆ. ಪಿಎಸ್‌ಎಲ್‌ವಿ ರಾಕೆಟ್ 2 ಘನ ಮತ್ತು 2 ದ್ರವ ಹಂತಗಳನ್ನು ಹೊಂದಿರುವ ನಾಲ್ಕು ಹಂತದ ರಾಕೆಟ್‌ನ ಮೂರನೆ ಅಂತ್ಯದ ವೇಳೆಗೆ ವಾಹನದ ಕಾರ್ಯಕ್ಷಮತೆ ನಿರೀಕ್ಷೆಯಂತೆ ಇತ್ತು. ಆದರೆ, ಮೂರನೇ ಹಂತದ ಅಂತ್ಯದ ವೇಳೆಗೆ ರಾಕೆಟ್‌ನಲ್ಲಿ ಸಮಸ್ಯೆ ಕಾಣಿಸಿ ತನ್ನ ಪಥದಲ್ಲಿ ಬದಲಾವಣೆ ಮಾಡಿತು. ನಾವು ಡೆಟಾವನ್ನು ವಿಶ್ಲೇಷಿಸಿ ಶೀಘ್ರವೇ ನಿಖರ ಕಾರಣವನ್ನು ಪತ್ತೆ ಮಾಡುತ್ತೇವೆ ಎಂದು ಹೇಳಿದರು.

ಮೂರನೇ ಹಂತದ ಅಂತ್ಯದ ವೇಳೆಗೆ ನಾವು ವಾಹನದಲ್ಲಿ ಕೆಲವು ಅಡಚಣೆಗಳನ್ನು ಗಮನಿಸಿದ್ದೇವೆ ಮತ್ತು ಅದರ ಹಾರಾಟದ ವೇಳೆಯಲ್ಲಿ ವಿಚಲನ ಕಂಡು ಬಂದಿದೆ. ಪರಿಣಾಮವಾಗಿ ಮಿಷನ್ ನಿರೀಕ್ಷೆಯಂತೆ ಮುಂದುವರೆಯಲು ಸಾಧ್ಯವಾಗಿಲ್ಲ. ಈಗ ನಾವು ಎಲ್ಲ ನೆಲ ಕೇಂದ್ರಗಳಿAದ ಡೆಟಾವನ್ನು ವಿಶ್ಲೇಷಿಸಿದ್ದೇವೆ. ಡೇಟಾವನ್ನು ವಿಶ್ಲೇಷಿಸಿದ ನಂತರ ನಿಮ್ಮ ಬಳಿ ಹಿಂದಿರುಗುತ್ತೇವೆ ಎಂದು ಡಾ. ನಾರಾಯಣ್ ಟ್ವೀಟ್ ಮಾಡಿದ್ದಾರೆ.

ಈ ವರ್ಷದಲ್ಲಿ ಇಸ್ರೋದ ಮೊದಲ ಪ್ರಮುಖ ಉಡಾವಣೆ ಇದಾಗಿದ್ದು, ಉಡಾವಣೆ ವಿಫಲವಾಗಿರುವುದು ನಿರಾಸೆ ಮೂಡಿಸಿದೆ. ಕಳೆದ ವರ್ಷದ ಮೇ 18 ರಂದು ಉಡಾವಣೆಯಾದ ಪಿಎಸ್‌ಎಲ್‌ವಿ ಸಿ. 61 ರಾಕೆಟ್‌ನಲ್ಲೂ ಮೂರನೆ ಹಂತದಲ್ಲಿ ದೋಷ ಕಂಡು ಬಂದಿದ್ದರಿAದ ಭೂ ವೀಕ್ಷಣೆ ಉಪಗ್ರಹವನ್ನು ಕಕ್ಷೆಗೆ ಸೇರಿಸಲು ವಿಫಲವಾಗಿತ್ತು. ಈ ವರ್ಷದ ಆರಂಭದ ಕಾರ್ಯಾಚರಣೆಯಲ್ಲಿ ಇಸ್ರೋ ವಿಜ್ಞಾನಿಗಳು ವೈಫಲ್ಯ ಎದುರಿಸುವಂತಾಗಿದೆ. ಪಿಎಸ್‌ಎಲ್‌ವಿ ಸಿ-62 ಅದ್ಧೂರಿಯಾಗಿ ಆರಂಭಗೊAಡ ಖುಷಿಯಲ್ಲಿದ್ದ ವೇಳೆ ನಿಗದಿತ ಕಕ್ಷೆ ಸೇರುವಲ್ಲಿ ವಿಫಲವಾಗಿದ್ದು, ನಿರಾಸೆ ಮೂಡಿಸಿತು.

ಸುಮಾರು 260 ಟನ್ ತೂಕದ ಪಿಎಸ್‌ಎಲ್‌ವಿಸಿ -62 ಉಪಗ್ರಹ ಆಕಾಶೆದೆಡೆ ಚಿಮ್ಮುತ್ತಿದ್ದರೆ ವಿಜ್ಞಾನಿಗಳಲ್ಲಿ ಹರ್ಷದ ವಾತಾವರಣ ನಿರ್ಮಾಣವಾಗಿತ್ತು. ಮೊದಲು ಮತ್ತು ಎರಡನೇ ಹಂತದ ಬೇರ್ಪಡುವಿಕೆ ಯಶಸ್ವಿಯಾಗಿತ್ತು . ಆದರೆ ಅಂತಿಮವಾಗಿ ನಿಯಂತ್ರಣ ಕಳೆದುಕೊಂಡು ನಿಗದಿತ ಕಕ್ಷೆ ಸೇರುವಲ್ಲಿ ವಿಫಲವಾಗಿದೆ.

 ರಕ್ಷಣಾ, ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಅಭಿವೃದ್ಧಿಪಡಿಸಿರುವ ಅನ್ವೇಷ ಉಪಗ್ರಹದ ಉಡ್ಡಯನದಿಂದ ಭಾರತೀಯ ಸೇನೆಗೆ ಶತ್ರುಗಳ ಮೇಲೆ ಹದ್ದಿನ ಕಣ್ಣಿಡುವ ಸಾಮರ್ಥ್ಯ ಹೆಚ್ಚಲಿತ್ತು. ಅತ್ಯಂತ ಗೌಪ್ಯ ವಿಚಕ್ಷಣೆ ಉದ್ದೇಶದ ಅನ್ವೇಷ ಉಪಗ್ರಹವು ಸೇನೆಗೆ ಭೂಮಿಯ ಮೇಲಿನ ಅದರಲ್ಲೂ ಗಡಿ ಭಾಗದ ಅತ್ಯಂತ ಸ್ಫುಟ ಮತ್ತು ಸ್ಪಷ್ಟ ಚಿತ್ರಗಳನ್ನು ರವಾನಿಸುತ್ತಿತ್ತು. ಜತೆಗೆ ಈ ಉಪಗ್ರಹ ಶತ್ರುಗಳ ಇರುವಿಕೆಯ ಸ್ಥಳಗಳನ್ನು ಅತ್ಯಂತ ನಿಖರವಾಗಿ ಗುರುತಿಸಲು ಸೇನೆಗೆ ನೆರವಾಗುತ್ತಿತ್ತು. ಇದೇ ಮೊದಲ ಬಾರಿಗೆ ಸಂಪೂರ್ಣ ಭಾರತೀಯ ಸಂಸ್ಥೆ ಧ್ರುವ ಸ್ಪೇಸ್ ಅಭಿವೃದ್ಧಿಪಡಿಸಿದ ಉಪಗ್ರಹ ಇದಾಗಿತ್ತು. ಧ್ರುವ ಸ್ಪೇಸ್ ಹೈದರಾಬಾದ್ ಮೂಲದ ಸಂಸ್ಥೆಯಾಗಿದ್ದು, ಈ ಉಪಗ್ರಹವನ್ನು ಕಕ್ಷೆಗೆ ಸೇರಿಸುವ ಕೆಲಸವನ್ನು ಇಸ್ರೋಗೆ ವಹಿಸಲಾಗಿತ್ತು. ಸುಮಾರು 15 ಉಪಗ್ರಹಗಳ ಕಕ್ಷೆಗೆ ಸೇರಿಸುವ ಈ ಪ್ರಯತ್ನ ವಿಫಲವಾದಂತಾಗಿದೆ. 


Ads on article

Advertise in articles 1

advertising articles 2

Advertise under the article