ಪರಿಸರ ತಜ್ಞ ಮಾಧವ ಗಾಡ್ಗಿಳ್ ನಿಧನ
Thursday, January 08, 2026
ಹಿರಿಯ ಪರಿಸರ ತಜ್ಞ ಮತ್ತು ಲೇಖಕ ಪ್ರೊ. ಮಾಧವ ಗಾಡ್ಗಿಲ್ ಅವರು ಬುಧವಾರ ರಾತ್ರಿ ಪೂಣೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು. ಗಾಡ್ಅಗಿಳ್ವ ಅವರ ಕುಟುಂಬಿಕರು ‘ಎಕ್ಸ್’ನಲ್ಲಿ ಈ ಸುದ್ದಿಯನ್ನು ದೃಢಪಡಿಸಿದ್ದಾರೆ.
ಅವರ ಅಂತ್ಯಕ್ರಿಯೆ ಇಂದು ಸಂಜೆ 4 ಗಂಟೆಗೆ ಪೂಣೆಯ ನವಿ ಪೇಠದಲ್ಲಿರುವ ವೈಕುಂಠ ಸ್ಮಶಾನಭೂಮಿಯಲ್ಲಿ ನಡೆಯಲಿದೆ.
ಪಶ್ಚಿಮ ಘಟ್ಟಗಳ ಕುರಿತು ತಮ್ಮ ಅವಿಸ್ಮರಣೀಯ ಸಂಶೋಧನೆ ಮತ್ತು ಭಾರತದ ಪರಿಸರ ನೀತಿ ಹಾಗೂ ಸಂರಕ್ಷಣೆಗೆ ನೀಡಿದ ಕೊಡುಗೆಗಳಿಗಾಗಿ ಪ್ರೊ. ಗಾಡ್ಗಿಲ್ ಅವರು ಪರಿಚಿತರಾಗಿದ್ದರು.
2011ರಲ್ಲಿ ಸ್ಥಾಪಿತವಾದ ಪಶ್ಚಿಮ ಘಟ್ಟ ಪರಿಸರ ತಜ್ಞರ ಸಮಿತಿ (WGEEP)ಯ ಅಧ್ಯಕ್ಷರಾಗಿ, ಪ್ರೊ. ಗಾಡ್ಗಿಳ್ ಅವರು ಪಶ್ಚಿಮ ಘಟ್ಟಗಳ ಸಂರಕ್ಷಣೆಯ ಕುರಿತ ಮಹತ್ವದ “ಗಾಡ್ಗಿಳ್ ವರದಿ”ಯನ್ನು ರಚಿಸಿದರು. ಈ ವರದಿಯಲ್ಲಿ ಪಶ್ಚಿಮ ಘಟ್ಟದ ಸಂಪೂರ್ಣ ಭಾಗವನ್ನು ಪರಿಸರದೃಷ್ಠಿಯಿಂದ ಸಂವೇದನಾಶೀಲ ಪ್ರದೇಶವೆಂದು ಘೋಷಿಸಲು ಶಿಫಾರಸು ಮಾಡಿದ್ದರು ಮತ್ತು ಅತಿ ಹೆಚ್ಚಿನ ಸಂವೇದನಾಶೀಲತೆಯ ವಲಯಗಳಲ್ಲಿ ಗಣಿಗಾರಿಕೆ ಮತ್ತು ದೊಡ್ಡ ಅಣೆಕಟ್ಟುಗಳಿಗೆ ನಿಷೇಧ ವಿಧಿಸುವಂತೆ ಕರೆ ನೀಡಿದ್ದರು.