ಬೈಂದೂರಿನ ಕಟ್ ಬೆಲ್ತೂರಿನಲ್ಲಿ ಗ್ರಾಮೋತ್ಸವ
Sunday, January 11, 2026
ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರ ಪರಿಕಲ್ಪನೆಯ ಬೈಂದೂರು ಉತ್ಸವ 2026 ಕಾರ್ಯಕ್ರಮದ ಪ್ರಯುಕ್ತ ಕಟ್ ಬೆಲ್ತೂರು ಮತ್ತು ದೇವಲ್ಕುಂದ ಗ್ರಾಮಗಳ ಹಾಗೂ ಸರ್ಕಾರಿ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಗ್ರಾಮೋತ್ಸವ ಕಾರ್ಯಕ್ರಮ ಭಾನುವಾರ ಕಟ್ ಬೆಲ್ತೂರು ಗ್ರಾಮ ಪಂಚಾಯತ್ ವಠಾರದಲ್ಲಿ ನಡೆಯಿತು.
ಕೊರಗ ಸಮುದಾಯದ ಹಿರಿಯರಾದ ಬೋಳ ಕೊರಗ ಅವರು ಕಟ್ ಬೆಲ್ತೂರು ಮತ್ತು ದೇವಲ್ಕುಂದ ಗ್ರಾಮಗಳ ಗ್ರಾಮೋತ್ಸವ ಕಾರ್ಯಕ್ರಮ ಉದ್ಘಾಟಿಸಿದರು.
ಕಟ್ ಬೆಲ್ತೂರು ಗ್ರಾಮ ಪಂಚಾಯತ್ ವೈಶಾಲಿ ಗ್ರಾಮೋತ್ಸವದ ಅಧ್ಯಕ್ಷತೆ ವಹಿಸಿದ್ದರು.
ಕಟ್ ಬೆಲ್ತೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಮ ಕೆ ಶೆಟ್ಟಿ, ಸದಸ್ಯರಾದ ವಿಮಲ, ಶ್ವೇತಾ ದೇವಾಡಿಗ, ಶಾಲಿನಿ ಶೆಟ್ಟಿ, ಅಶೋಕ್ ಬಳೆಗಾರ್, ಶರತ್ ಕುಮಾರ್ ಶೆಟ್ಟಿ, ಜ್ಯೋತಿ, ಸವಿತಾ ರಾಘವೇಂದ್ರ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಅನುಸೂಯ ಆಚಾರ್, ವೇದಿಕೆಯಲ್ಲಿ ಇದ್ದರು.
ಬೈಂದೂರು ಉತ್ಸವ ಸಮಿತಿ ಉಪಾಧ್ಯಕ್ಷೆ ಅನಿತಾ ಆರ್. ಕೆ ಮರವಂತೆ, ಸಮಿತಿ ಸಂಚಾಲಕ ಶ್ರೀಗಣೇಶ್ ಗಾಣಿಗ ಉಪ್ಪುಂದ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಿದರು.
ಕಟ್ ಬೆಲ್ತೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೇಖಾ ಸ್ವಾಗತಿಸಿದರು. ಹೆಮ್ಮಾಡಿ ಜನತಾ ಪ್ರೌಢಶಾಲಾ ಶಿಕ್ಷಕ ಜಗದೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಟ್ ಬೆಲ್ತೂರು ಗ್ರಾಮೋತ್ಸವ ಸಂಚಾಲಕ ಸದಾಶಿವ ಶೆಟ್ಟಿ ವಂದಿಸಿದರು.