ಜರ್ಮನಿಯಲ್ಲಿ ಬೆಂಕಿ ಅವಘಡ; ಭಾರತೀಯ ವಿದ್ಯಾರ್ಥಿ ಸಾವು
Friday, January 02, 2026
ಜರ್ಮನಿಯಲ್ಲಿ ನಡೆದ ಬೆಂಕಿ ಅವಘಡದಲ್ಲಿ ಭಾರತೀಯ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ನಡೆದಿದೆ.
ತೆಲಂಗಾಣದ ಹೃತಿಕ್ ರೆಡ್ಡಿ ಮೃತ ವಿದ್ಯಾರ್ಥಿ. ಜರ್ಮನಿಯಲ್ಲಿರುವ ನಿವಾಸದಲ್ಲಿ ತೀವ್ರ ಬೆಂಕಿ ಕಾಣಿಸಿಕೊಂಡಿತ್ತು. ತಡರಾತ್ರಿ ಸಂಭವಿಸಿದ ಬೆಂಕಿ ಅಪಘಡದಲ್ಲಿ 25 ವರ್ಷದ ವಿದ್ಯಾರ್ಥಿ ಹೃತಿಕ್ ಸಾವನ್ನಪ್ಪಿದ್ದಾರೆ. ಹೃತಿಕ್ ರೆಡ್ಡಿ ಯುರೋಪ್ ವಿಶ್ವವಿದ್ಯಾಲಯದಲ್ಲಿ ಎಂಎಸ್ ಪದವಿ ಪಡೆಯಲು 2023 ರ ಜೂನ್‌ನಲ್ಲಿ ಜರ್ಮನಿಯ ಮ್ಯಾಗ್ಡೆಬರ್ಗ್ಗೆ ತೆರಳಿದ್ದರು. 2022 ರಲ್ಲಿ ವಾಗ್ದೇವಿ ಕಾಲೇಜ್ ಆಫ್ ಎಂಜಿನಿಯರಿOಗ್‌ನಿOದ ಪದವಿ ಪಡೆದಿದ್ದರು.