ಸಮಾಜ ಸೇವಕ, ಲೇಖಕ ಸಿರಾಜ್ ಮಲ್ಪೆ ಹೃದಯಾಘಾತದಿಂದ ನಿಧನ
Friday, January 02, 2026
ಮಲ್ಪೆಯ ಜಮಾಅತೆ ಇಸ್ಲಾಮಿ ಹಿಂದ್ ಅಧ್ಯಕ್ಷ, ಸಮಾಜ ಸೇವಕ ಸಿರಾಜ್ ಮಲ್ಪೆ ಇಂದು ಹೃದಯಾಘಾತದಿಂದ ಮಣಿಪಾಲ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಅವರು ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆಯ ಮಲ್ಪೆ ಶಾಖೆಯ ಅಧ್ಯಕ್ಷರಾಗಿದ್ದರು. ಅವರು ಸಕ್ರಿಯವಾಗಿ ಸಾಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದು, ಸಮುದಾಯ ಕಲ್ಯಾಣ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಲೇಖಕರಾಗಿದ್ದ ಸಿರಾಜ್ ಅನುಗ್ರಹ ಟ್ರಸ್ಟ್ ನ ಸದಸ್ಯರಾಗಿದ್ದರು. ಮೃತರು ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಜಮಾಅತೆ ಇಸ್ಲಾಮಿ ಹಿಂದ್ ಜಿಲ್ಲಾಧ್ಯಕ್ಷರಾದ ಡಾ.ಅಬ್ದುಲ್ ಅಝೀಜ್ ಅವರು ಸಿರಾಜ್ ಮಲ್ಪೆಯ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಸಿರಾಜ್ ಅವರ ಜನಪರ ನಿಲುವುಗಳನ್ನು ಈ ಸಂದರ್ಭದಲ್ಲಿ ಸ್ಮರಿಸಿದ ಅವರು, ಜಮಾಅತಿನ ಸಕ್ರಿಯ ಸದಸ್ಯರಾಗಿದ್ದು ಒಳ್ಳೆಯ ನಾಯಕತ್ವ ಗುಣಗಳನ್ನು ಹೊಂದಿದ್ದರು. ಸಿರಾಜ್ ಅವರ ನಿಧನ ನಿಜಕ್ಕೂ ಈ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ತಿಳಿಸಿದ್ದಾರೆ.