-->
 ನಿವೃತ್ತ ಪೊಲೀಸ್ ಅಧಿಕಾರಿ ದಯಾ ನಾಯಕ್‌ಗೆ 'ಕೀರ್ತಿ ಕಲಶ' ಮಹಾಗೌರವ

ನಿವೃತ್ತ ಪೊಲೀಸ್ ಅಧಿಕಾರಿ ದಯಾ ನಾಯಕ್‌ಗೆ 'ಕೀರ್ತಿ ಕಲಶ' ಮಹಾಗೌರವ


ಗಿಳಿಯಾರು ಜನಸೇವಾ ಟ್ರಸ್ಟ್ ವತಿಯಿಂದ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದವರಿಗೆ ಕೊಡಮಾಡುವ ‘ಕೀರ್ತಿ ಕಲಶ’ ಮಹಾಗೌರವಕ್ಕೆ ಈ ಬಾರಿ ಮಹಾರಾಷ್ಟ್ರದ ನಿವೃತ್ತ ಪೊಲೀಸ್ ಅಧಿಕಾರಿ, ಕಾರ್ಕಳ ಎಣ್ಣೆಹೊಳೆಯ ದಯಾ ನಾಯಕ್ ಅವರನ್ನು ಆಯ್ಕೆ ಮಾಡಲಾಗಿದೆ.

ಈ ಬಗ್ಗೆ ಎಂದು ಜನಸೇವಾ ಟ್ರಸ್ಟ್ ಪ್ರವರ್ತಕ ವಸಂತ್ ಗಿಳಿಯಾರ್ ತಿಳಿಸಿದ್ದಾರೆ. ‘ಯಶೋಗಾಥೆ ಪುರಸ್ಕಾರ’ವನ್ನು ಹಿರಿಯ ತುಳು ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್, ಬಸ್ರೂರಿನ ಹಿರಿಯ ಸೂಲಗಿತ್ತಿ ಲಕ್ಷ್ಮೀ ಪೂಜಾರಿ ಗುಂಡಿಗೋಳಿ ಹಾಗೂ 25 ವರ್ಷಗಳಿಂದ ಸುದೀರ್ಘ ಕಲಾಸೇವೆ ಮಾಡುತ್ತಿರುವ ಯಶಸ್ವಿ ಕಲಾವೃಂದ ಸಂಘಟನೆಗೆ ನೀಡಲಾಗುತ್ತದೆ. ಬ್ರಹ್ಮಾವರದ ಗಾಂಧಿ ಮೈದಾನದಲ್ಲಿ ಜ.14ರಂದು ಸಂಜೆ 6ರಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅಧ್ಯಕ್ಷತೆಯಲ್ಲಿ ನಡೆಯುವ ವಾರ್ಷಿಕ ಉತ್ಸವ ‘ಅಭಿಮತ ಸಂಭ್ರಮ’ ದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ವಸಂತ್ ಗಿಳಿಯಾರ್ ತಿಳಿಸಿದ್ದಾರೆ.


 

Ads on article

Advertise in articles 1

advertising articles 2

Advertise under the article