ಹೊಸ ವರ್ಷದ ಮೊದಲ ದಿನವೇ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ...!
Thursday, January 01, 2026
ಹೊಸ ವರ್ಷದ ಮೊದಲ ದಿನವೇ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆಯಾಗಿದೆ. 2025ರಲ್ಲಿ 200 ರೂಪಾಯಿಗೂ ಹೆಚ್ಚು ಇಳಿಕೆ ಕಂಡಿದ್ದ ಕಮರ್ಷಿಯಲ್ ಎಲ್‌ಪಿಜಿ ಗ್ಯಾಸ್ ಬೆಲೆ ಏರಿಕೆ ಆಗಿದೆ.
ಆದರೆ, ಗೃಹಬಳಕೆ ಗ್ಯಾಸ್ ಬೆಲೆಯಲ್ಲಿ ಏರಿಕೆ ಆಗಿಲ್ಲ. 19 ಕಿಲೋ ಮತ್ತು 47.50 ಕಿಲೋ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್‌ಗಳು ದುಬಾರಿಯಾಗಿವೆ. 19 ಕಿಲೋ ಎಲ್‌ಪಿಜಿ ಸಿಲಿಂಡರ್ ಬೆಲೆ 110 ರೂನಿಂದ 112 ರೂನಷ್ಟು ಏರಿದೆ. ಬೆಂಗಳೂರಿನಲ್ಲಿ 110.50 ರೂ ಬೆಲೆ ಹೆಚ್ಚಳ ಆಗಿದೆ. ಇನ್ನು, 47.50 ಕಿಲೋ ತೂಕದ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 274.50 ರೂ ಏರಿಕೆ ಆಗಿದ್ದು, 4,407 ರೂ ಗಡಿ ಮುಟ್ಟಿದೆ.
ಕೋಲ್ಕತ್ತಾದಲ್ಲಿ ಬೆಲೆ ರೂ.1795ಕ್ಕೆ ಏರಿದ್ದು, ರೂ.111 ರಷ್ಟು ಹೆಚ್ಚಳವಾಗಿದೆ. ಚೆನ್ನೈ ಮತ್ತು ಬೆಂಗಳೂರಿನಲ್ಲಿ ತಕ್ಕಂತೆ ರೂ.1849.50 ಮತ್ತು ರೂ.1700 ರುಪಾಯಿಗಳಲ್ಲಿ ಸಿಲಿಂಡರ್ ಲಭ್ಯವಾಗಲಿದೆ.
ಕೇಂದ್ರ ಸರ್ಕಾರದ ಈ ನಿರ್ಧಾರವು ವಾಣಿಜ್ಯ ಬಳಕೆದಾರರಿಗೆ ನೇರ ಪ್ರಭಾವ ಬೀರುತ್ತಿದ್ದು, ಉದ್ಯಮಗಳು ಮತ್ತು ವಾಣಿಜ್ಯ ಪ್ರದೇಶಗಳಲ್ಲಿ ಹೆಚ್ಚಿನ ಖರ್ಚು ಎದುರಿಸಬೇಕಾಗುತ್ತದೆ. ಇಂಧನ ದರಗಳ ಮೇಲಿನ ನಿಯಂತ್ರಣ ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಮುಂದಿನ ತಿಂಗಳೂ ಸರ್ಕಾರ ದರ ಪರಿಷ್ಕರಣೆಯಾಗುವ ಸಾಧ್ಯತೆ ಇದೆ.