ಕುಕ್ಕೆ ಸುಬ್ರಹ್ಮಣ್ಯ ರಾಜ್ಯದ ಶ್ರೀಮಂತ ದೇವಾಲಯ..!
Thursday, January 01, 2026
ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು ಆದಾಯ ಗಳಿಕೆಯಲ್ಲಿ ಅತ್ಯಂತ ಶ್ರೀಮಂತ ದೇವಾಲಯ ಎನಿಸಿದೆ.
ಈ ದೇಗುಲ 2022-23 ರಲ್ಲಿ 123 ಕೋಟಿ, 2023-23ರಲ್ಲಿ 146 ಕೋಟಿ ರೂಪಾಯಿ, 2024-25ರಲ್ಲಿ 155 ಕೋಟಿ ಆದಾಯದೊಂದಿಗೆ ಮೊದಲ ಸ್ಥಾನದಲ್ಲಿದೆ. ಕೊಲ್ಲೂರು ಮೂಕಾಂಬಿಕಾ ದೇವಾಲಯ ಮತ್ತು ಮೈಸೂರು ಚಾಮುಂಡೇಶ್ವರಿ ದೇವಾಲಯ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದೆ.
ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು 34,566 ದೇವಾಲಯಗಳಿದ್ದು, ಇವುಗಳಲ್ಲಿ 205 ದೇವಾಲಯಗಳು ಎ ವರ್ಗ, 193 ದೇವಾಲಯಗಳು ಬಿ ವರ್ಗ ಹಾಗೂ 34,168 ದೇವಾಲಯಗಳು ಸಿ ವರ್ಗದಲ್ಲಿವೆ.
ಮೂರು ವರ್ಷಗಳಿಂದ ವರ್ಷದಿಂದ ವರ್ಷಕ್ಕೆ ದೇವಾಲಯಗಳ ವರಮಾನ ಹೆಚ್ಚಳವಾಗುತ್ತಿದೆ. ರಾಜ್ಯದ ಪ್ರಮುಖ 10 ದೇವಸ್ಥಾನಗಳಿಂದ 2022-23ರಲ್ಲಿ 368 ಕೋಟಿ, 2023-24ರಲ್ಲಿ 418 ಕೋಟಿ ಹಾಗೂ 2024-25ರಲ್ಲಿ 433 ಕೋಟಿ ಆದಾಯ ಗಳಿಕೆಯಾಗಿದೆ.