-->
 ತೆಂಗಿನ ಚಿಪ್ಪಿಗೂ ಮಾರುಕಟ್ಟೆಯಲ್ಲಿ ಡಿಮ್ಯಾಂಡಪ್ಪೊ ಡಿಮ್ಯಾಂಡ್...!

ತೆಂಗಿನ ಚಿಪ್ಪಿಗೂ ಮಾರುಕಟ್ಟೆಯಲ್ಲಿ ಡಿಮ್ಯಾಂಡಪ್ಪೊ ಡಿಮ್ಯಾಂಡ್...!


ತೆಂಗು ಕಲ್ಪವೃಕ್ಷ. ತೆಂಗಿನ ಮರದ ಹೂ ಕಾಯಿ ತೊಗಟೆ ಎಲ್ಲವೂ ಒಂದಿಲ್ಲೊಂದು ಉಪಯೋಗಕ್ಕೆ ಬರುತ್ತವೆ. ತೆಂಗಿನ ಕಾಯಿ ಕೆಲ ಕೃಷಿಕರ ಆದಾಯದ ಮೂಲವೂ ಹೌದು.  ಒಣ ತೆಂಗಿನ ಚಿಪ್ಪು ಉರುವಲು ಆಗಿಯೂ ಬಳಕೆಯಾಗುತ್ತಿತ್ತು. ಇನ್ನು ಮುಂದೆ ತೆಂಗಿನಕಾಯಿ ತುರಿದ ಗೆರಟೆಯನ್ನು ಕೇವಲ ಉರುವಲಾಗಿ ಉಪಯೋಗಿಸಬೇಡಿ. ತೆಂಗಿನ ಚಿಪ್ಪನ್ನು ಹಾಗೆಯೇ ಸಂಗ್ರಹಿಸಿಟ್ಟು ಮಾರಾಟ ಮಾಡಿದರೆ ಹಣ ಗಳಿಸಬಹುದು. 


ಕಾಯಿ ತುರಿದ ಗೆರಟೆಯನ್ನು ಇನ್ನು ಮುಂದೆ ನಿರುಪಕಾರಿ ಅಂತಾ ಎಸೆಯಬೇಡಿ. ಈ ತೆಂಗಿನ ಚಿಪ್ಪಿಗೂ ಭರ್ಜರಿ ಬೆಲೆ ಬಂದಿದೆ. ಅಷ್ಟೇ ಅಲ್ಲ ತೆಂಗಿನ ಗೆರಟೆ ಇದ್ರೆ ಕೊಡಿ ಅಂತ ಮನೆ ಮನೆಗೆ ಬರುವ ಕಾಲವೂ ಬಂದಿದೆ. ತೆಂಗು ಬಲು ದುಬಾರಿ. ತೆಂಗಿನ ಕಾಯಿ, ತೆಂಗಿನ ಎಣ್ಣೆ ಎಲ್ಲವೂ ದುಬಾರಿ ಬೆಲೆಗೆ ಮಾರಾಟವಾಗುತ್ತಿದ್ದು, ತೆಂಗಿನ ಚಿಪ್ಪುವಿಗೂ ದುಬಾರಿ ಬೆಲೆ ಇದೆ. ಒಂದು ಟನ್ ಸಿಪ್ಪೆಯನ್ನು 26,500 ರೂಪಾಯಿಗೆ ಮಾರಾಟವಾಗುತ್ತಿದೆ. 

ಕರ್ನಾಟಕದ ಬಹುತೇಕ ಭಾಗಗಳಲ್ಲಿ ತೆಂಗಿನ ಚಿಪ್ಪನ್ನು ಖರೀದಿಸಲಾಗುತ್ತಿದೆ. ದಕ್ಷಿಣ ಕನ್ನಡ, ಉಡುಪಿ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲೂ ತೆಂಗಿನ ಚಿಪ್ಪು ಖರೀದಿಯ ವ್ಯಾಪಾರವೊಂದು ನಡೆಯುತ್ತಿದೆ. 

ಅಂದ ಹಾಗೆ ಈ ತೆಂಗಿನ ಚಿಪ್ಪುಗಳಿಂದ ಇದ್ದಿಲು ತಯಾರಿಸಿ ಹೊರರಾಜ್ಯಗಳಿಗೆ ಮಾರಾಟ ಮಾಡಲಾಗುತ್ತದೆ. ತಮಿಳು ನಾಡು ಹಾಗೂ ಕೇರಳದಲ್ಲಿ ತೆಂಗಿನ ಉತ್ಪಾದನೆ ಕಡಿಮೆಯಾಗಿರುವುದರಿಂದ ತೆಂಗಿನ ಚಿಪ್ಪಿಗೂ ಕೊರತೆ ಕಾಡುತ್ತಿದೆ. ಹೀಗಾಗಿ ಕರ್ನಾಟಕದಿಂದ ಚಿಪ್ಪು ಸಂಗ್ರಹಿಸಿ ಸುಟ್ಟು ಇದ್ದಿಲು ಮಾಡಿ ಕೇರಳ, ತಮಿಳುನಾಡು ಕಾರ್ಖಾನೆಗಳಿಗೆ ಮಾರಾಟ ಮಾಡುತ್ತಾರೆ. ಇನ್ನು ತೆಂಗಿನ ಚಿಪ್ಪುಗಳನ್ನು ಕೇವಲ ಇದ್ದಿಲಿಗೆ ಮಾತ್ರ ಬಳಕೆ ಮಾಡುತ್ತಿಲ್ಲ. 

ಸೌಂದರ್ಯವರ್ಧಕ ತಯಾರಿಕೆ, ಕ್ರೀಂ, ವಾಟರ್ ಪೇಂಟ್ ತಯಾರಿಕೆಗೂ ತೆಂಗಿನ ಚಿಪ್ಪುಗಳನ್ನು ಬಳಕೆ ಮಾಡುತ್ತಾರೆ. ಭಾರೀ ಡಿಮ್ಯಾಂಡ್ ಇರುವ ತೆಂಗಿನ ಚಿಪ್ಪುಗಳ ಕೊರತೆ ಕಂಡು ಬಂದಿದೆ. ಹೀಗಾಗಿ ರಾಜ್ಯದ ಕೆಲ ಜಿಲ್ಲೆಗಳಲ್ಲಿ "ತೆಂಗಿನ ಚಿಪ್ಪು ತನ್ನಿ ಹಣ ಗಳಿಸಿ" ಎಂಬ ಅಭಿಯಾನವೂ ಆರಂಭಿಸಲಾಗಿದೆ. ಮನೆ ಮನೆಗೂ ತೆರಳಿ ತೆಂಗಿನ ಚಿಪ್ಪುಗಳನ್ನು ಸಂಗ್ರಹಿಸಲಾಗುತ್ತಿದೆ. 

ಒಟ್ಟಿನಲ್ಲಿ ಕಾಯಿ ಬಳಸಿ ಬಿಸಾಡುತ್ತಿದ್ದ ಗೆರಟೆಯೂ ಮಾರುಕಟ್ಟೆಯಲ್ಲಿ ತನಗೊಂದು ಸ್ಥಾನ ಗಿಟ್ಟಿಸಿಕೊಂಡಿದೆ. ಹೀಗಾಗಿ ಹಳ್ಳಿಯಲ್ಲಿ ಉರುವಲು ಆಗಿ ಬಳಕೆಯಾಗುತ್ತಿದ್ದ ತೆಂಗಿನ ಚಿಪ್ಪು ವಾಣಿಜ್ಯದ ವಸ್ತುವಾಗಿ ಬಿಟ್ಟಿದೆ. 



Ads on article

Advertise in articles 1

advertising articles 2

Advertise under the article