ಹೆಜಮಾಡಿ ಕಡಲ ತೀರದಲ್ಲಿ ಬೂತಾಯಿ ಮೀನಿನ ಸುಗ್ಗಿ
Saturday, January 03, 2026
ಉಡುಪಿಯ ಹೆಜಮಾಡಿ ಕಡಲ ತೀರದಲ್ಲಿ ಬೂತಾಯಿ ಮೀನಿನ ಅಪರೂಪದ ಸುಗ್ಗಿ ಕಂಡುಬಂದಿದ್ದು, ಹೆಜಮಾಡಿ ಕಡಲ ತೀರದಲ್ಲಿ ರಾಶಿ ರಾಶಿ ಮೀನುಗಳು ತೀರಕ್ಕೆ ಹರಿದುಬಂದಿವೆ.
ಸಾಂಪ್ರದಾಯಿಕ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಲಕ್ಷಾಂತರ ಬೂತಾಯಿ ಮೀನುಗಳು ತೀರ ಪ್ರದೇಶದತ್ತ ಚಲಿಸಿದ್ದು, ಕೈರಂಪಣಿ ಬಲೆ ಬೀಸಿದ ಸಂದರ್ಭ ತೀರಕ್ಕೆ ಜಿಗಿದು ಬಿದ್ದಿವೆ. ಬೇರೆಲ್ಲ ಮೀನುಗಳ ಬೆಲೆ ಏರಿಕೆಯಾಗಿರುವ ಈ ಸಂದರ್ಭದಲ್ಲಿ, ಬೂತಾಯಿ ಮೀನುಗಳು ಹೇರಳವಾಗಿ ಲಭ್ಯವಾಗಿದ್ದು, ತೀರದ ಜನರು ಕೈಗೆ ಸಿಕ್ಕಷ್ಟು ಮೀನು ಹಿಡಿದುಕೊಂಡು ಹೋಗಿದ್ದಾರೆ. ತೀರ ಪ್ರದೇಶದಲ್ಲಿ ಬೂತಾಯಿ ಮೀನುಗಳು ಜಿಗಿಯುತ್ತಿರುವ ದೃಶ್ಯಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

