ಕಟಪಾಡಿ ವೆಂಕಟರಮಣ ದೇವಸ್ಥಾನದಲ್ಲೂ ಭಕ್ತರಿಗೆ ವಸ್ತ್ರ ಸಂಹಿತೆ ಕಡ್ಡಾಯ
Thursday, January 22, 2026
ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಭಕ್ತಾದಿಗಳಿಗೆ ವಸ್ತ್ರ ಸಂಹಿತೆ ಕಡ್ಡಾಯಗೊಳಿಸಿದ ಬೆನ್ನಲ್ಲೇ ಇದೀಗ ವೆಂಕಟರಮಣ ದೇವಸ್ಥಾನದಲ್ಲೂ ವಸ್ತ್ರ ಸಂಹಿತೆ ಜಾರಿ ಮಾಡಲಾಗಿದೆ.
ಉಡುಪಿಯ ಕಟಪಾಡಿಯಲ್ಲಿರುವ ವೆಂಕಟರಮಣ ದೇವಸ್ಥಾನಕ್ಕೆ ಬರುವ ಭಕ್ತರು ಇನ್ನು ಮುಂದೆ ಬರ್ಮುಡಾ, ಜೀನ್ಸ್, ಟೀ ಶರ್ಟ್, ಸ್ಲೀವ್ ಲೆಸ್ ಬಟ್ಟೆ, ಸ್ಕರ್ಟ್, ಮಿಡಿ, ಶಾರ್ಟ್ಸ್ ಧರಿಸುವಂತಿಲ್ಲ. ಪುರುಷ ಭಕ್ತರು ಧೋತಿ, ಫೈಜಾಮಾ, ಶರ್ಟ್, ಟ್ರೌಸರ್, ಕುರ್ತಾ ಧರಿಸಿ ಬರಬೇಕು. ಮಹಿಳಾ ಭಕ್ತರು ಸೀರೆ, ಚೂಡಿದಾರ್, ರವಿಕೆ ಸಲ್ವಾರ್ ಜೊತೆ ದುಪ್ಪಟ್ಟ ಅಥವಾ ಲಂಗ ದಾವಣಿಯನ್ನು ಧರಿಸಬೇಕು. ಸಭ್ಯವಲ್ಲದ ವಸ್ತçಗಳನ್ನು ಧರಿಸಿ ಬರುವವರಿಗೆ ದೇವಸ್ಥಾನದೊಳಗೆ ಪ್ರವೇಶ ನಿಷಿದ್ಧ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.