ಕ.ರಾ.ರ.ಸಾ.ನಿಗಮದ ಪ್ರತಿಷ್ಠಿತ ಬಸ್‌ಗಳ ದರ ಕಡಿತ
Sunday, January 04, 2026
ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗದ ಪ್ರತಿಷ್ಠಿತ ಬಸ್ ಸೇವೆಗಳ ಪ್ರಯಾಣ ದರವನ್ನು ಶೇ.10ರಿಂದ 15ರವರೆಗೆ ಕಡಿತಗೊಳಿಸಲಾಗಿದೆ. ಜನವರಿ 5ರಿಂದ ಈ ದರಗಳು ಜಾರಿಗೆ ಬರಲಿವೆ.
ಕುಂದಾಪುರ–ಬೆಂಗಳೂರು ಮಾರ್ಗದಲ್ಲಿ ಅಂಬಾರಿ ಉತ್ಸವ ಬಸ್‌ಗೆ ರೂ.1510, ಡ್ರೀಮ್‌ಕ್ಲಾಸ್‌ಗೆ ರೂ.1350, ಮಲ್ಟಿ ಆಕ್ಸಿಲ್ 2.0ಗೆ ರೂ.1310, ಮಲ್ಟಿ ಆಕ್ಸಿಲ್‌ಗೆ ರೂ.1110, ನಾನ್ ಎಸಿ ಸ್ಲೀಪರ್‌ಗೆ ರೂ.1050, ಪಲ್ಲಕ್ಕಿ ನಾನ್ ಎಸಿ ಸ್ಲೀಪರ್‌ಗೆ ರೂ.1100 ಹಾಗೂ ರಾಜಹಂಸಕ್ಕೆ ರೂ.750 ದರ ನಿಗದಿಯಾಗಿದೆ.
ಉಡುಪಿ–ಬೆಂಗಳೂರು ಮಾರ್ಗದಲ್ಲಿ ಅಂಬಾರಿ ಉತ್ಸವ ರೂ.1460, ಡ್ರೀಮ್‌ಕ್ಲಾಸ್ ರೂ.1300, ಮಲ್ಟಿ ಆಕ್ಸಿಲ್ 2.0 ರೂ.1250, ಮಲ್ಟಿ ಆಕ್ಸಿಲ್ ರೂ.1060, ನಾನ್ ಎಸಿ ಸ್ಲೀಪರ್ ರೂ.1000, ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ ರೂ.1060 ಹಾಗೂ ರಾಜಹಂಸ ರೂ.700 ಆಗಿದೆ.
ಮಂಗಳೂರು–ಬೆಂಗಳೂರು ಮಾರ್ಗದಲ್ಲಿ ಅಂಬಾರಿ ಉತ್ಸವ ರೂ.1350, ಡ್ರೀಮ್‌ಕ್ಲಾಸ್ ರೂ.1200, ಮಲ್ಟಿ ಆಕ್ಸಿಲ್ 2.0 ರೂ.1150, ಮಲ್ಟಿ ಆಕ್ಸಿಲ್ ರೂ.1000, ನಾನ್ ಎಸಿ ಸ್ಲೀಪರ್ ರೂ.900, ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ ರೂ.950 ಹಾಗೂ ರಾಜಹಂಸ ರೂ.650 ದರ ವಿಧಿಸಲಾಗುವುದು ಎಂದು ಮಂಗಳೂರು ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
