ಶೀರೂರು ಪರ್ಯಾಯಕ್ಕೆ ಹೊರೆ ಕಾಣಿಕೆ ಸಮರ್ಪಣೆ
Monday, January 12, 2026
ಶೀರೂರು ಪರ್ಯಾಯದ ಪೂರ್ವಭಾವಿಯಾಗಿ ಹೊರೆಕಾಣಿಕೆಯ ಕಾರ್ಯಕ್ರಮಕ್ಕೆ ಉಡುಪಿಯ ಜೋಡುಕಟ್ಟೆ ಬಳಿ ದಿವಾನರಾದ ಡಾ. ಉದಯ ಕುಮಾರ್ ಸರಳತ್ತಾಯ ಹಾಗೂ ಶಾಸಕ, ಪರ್ಯಾಯ ಸ್ವಾಗತ ಸಮಿತಿಯ ಅಧ್ಯಕ್ಷ ಯಶಪಾಲ್ ಸುವರ್ಣ ಅವರು ಅಧಿಕೃತವಾಗಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಡಾ. ಉದಯಕುಮಾರ್ ಸರಳತ್ತಾಯ, ಶೀರೂರು ಪರ್ಯಾಯ ಎಂದರೆ ಭಕ್ತರ ಪರ್ಯಾಯ. ಕೃಷ್ಣ ಭಕ್ತರೆಲ್ಲರೂ ಈ ಮಹೋತ್ಸವದಲ್ಲಿ ಭಾಗಿಯಾಗಬೇಕು ಎಂದರು.
ಹೊರೆಕಾಣಿಕೆ ಸಮಿತಿಯ ಸಂಚಾಲಕ ಸುಪ್ರಸಾದ್ ಶೆಟ್ಟಿ ಬೈಕಾಡಿ ನೇತೃತ್ವದಲ್ಲಿ ಹೊರೆಕಾಣೀಕೆ ಮೆರವಣಿಗೆ ನಡೆದಿದ್ದು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಒಕ್ಕೂಟ ಹಾಗೂ ಬೆಳ್ತಂಗಡಿ ಭಾಗದಿಂದ ಹೊರೆ ಕಾಣಿಕೆ ಸಮರ್ಪಿಸಲಾಯಿತು.
150ಕ್ಕೂ ಅಧಿಕ ವಾಹನಗಳಲ್ಲಿ ದವಸ ಧಾನ್ಯ, ಅಕ್ಕಿ ಮುಡಿ ಹಾಗೂ ತರಕಾರಿಗಳನ್ನು ಸಾಂಪ್ರದಾಯಿಕ ಮೆರವಣಿಗೆಯಲ್ಲಿ ಶ್ರದ್ಧಾ ಭಕ್ತಿಯಿಂದ ಕೊಂಡೊಯ್ದು ಮೆರವಣಿಗೆಯ ಮೂಲಕ ಉಗ್ರಾಣಕ್ಕೆ ಸಾಗಿಸಲಾಯಿತು. ಕೃಷ್ಣಮಠದ ಪಾರ್ಕಿಂಗ್ ಬಳಿ ನಿರ್ಮಿಸಿರುವ ಉಗ್ರಾಣದಲ್ಲಿ ಹೊರೆ ಕಾಣಿಕೆಯಲ್ಲಿ ಇರಿಸಲಾಯಿತು. ಭಾವೀ ಪರ್ಯಾಯ ಶೀರೂರು ಶ್ರೀಗಳು ಉಗ್ರಾಣಕ್ಕೆ ಭೇಟಿ ನೀಡಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ನಾಗರಾಜ್ ಶೆಟ್ಟಿ, ಶೀರೂರು , ಪರ್ಯಾಯ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ್ ಹೆಗ್ಡೆ, ಕಾರ್ಯದರ್ಶಿ ಮೋಹನ್ ಭಟ್, ಮಠದ ದಿವಾನ ಡಾ. ಉದಯಕುಮಾರ್ ಸರಳತ್ತಾಯ, ಶ್ರೀವಿದ್ಯಾ ಸರಳತ್ತಾಯ, ಜನಜಾಗೃತಿ ಸಮಿತಿಯ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ದೇವದಾಸ್ ಹೆಬ್ಬಾರ್, ಕಾಪು ಮಾರಿಗುಡಿ ಮೊಕ್ತೇಸರ ರತ್ನಾಕರ್ ಶೆಟ್ಟಿ, ಬ್ರಾಹ್ಮಣ ಪರಿಷತ್ ಜಿಲ್ಲಾಧ್ಯಕ್ಷ ಸಂದೀಪ್ ಮಂಜ, ಶ್ರೀನಿವಾಸ್ ಉಪಾಧ್ಯ, ಶ್ರೀಕಾಂತ ನಾಯಕ, ಸತ್ಯಾನಂದ ನಾಯಕ, ಉದಯ ಶೆಟ್ಟಿ ಇನ್ನಾ, ಮಧುಕರ್ ಮುದ್ರಾಡಿ, ವಿಜಯ್ ಕೊಡವೂರು, ವೀಣಾ ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು.




.jpeg)
.jpeg)