ಮುಸ್ಲಿಂ ಸೌಹಾರ್ದ ಸಮಿತಿ ಹೊರೆಕಾಣಿಕೆಗೆ ಅನುಮತಿ ನೀಡಿಲ್ಲ, ಗೊಂದಲ ಬೇಡ- ಯಶ್‌ಪಾಲ್ ಸುವರ್ಣ
Saturday, January 03, 2026
ಶಿರೂರು ಪರ್ಯಾಯಕ್ಕೆ ಉಡುಪಿ ಜಿಲ್ಲಾ ಮುಸ್ಲಿಂ ಸೌಹಾರ್ದ ಸಮಿತಿಯಿಂದ ಹೊರೆ ಕಾಣಿಕೆ ನೀಡುವುದಕ್ಕೆ ಪರ್ಯಾಯ ಸ್ವಾಗತ ಸಮಿತಿ ಯಾವುದೇ ಅನುಮತಿ ನೀಡಿಲ್ಲ. ಈ ಬಗ್ಗೆ ಗೊಂದಲ ಸೃಷ್ಟಿಸುವುದು ಬೇಡ ಎಂದು ಶಿರೂರು ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಯಶ್ ಪಾಲ್ ಸುವರ್ಣ ಹೇಳಿದ್ದಾರೆ.
ಉಡುಪಿಯ ಶಿರೂರು ಪರ್ಯಾಯಕ್ಕೆ ಉಡುಪಿ ಜಿಲ್ಲಾ ಮುಸ್ಲಿಂ ಸೌಹಾರ್ದ ಸಮಿತಿ ವತಿಯಿಂದ ಹೊರೆ ಕಾಣಿಕೆ ನೀಡುವ ಬಗ್ಗೆ ಉಡುಪಿಯಲ್ಲಿ ಸುದ್ದಿಗೋಷ್ಟಿ ನಡೆಸಿರುವುದಕ್ಕೆ ಶಾಸಕ ಯಶ್‌ಪಾಲ್ ಸುವರ್ಣ ಪ್ರತಿಕ್ರಿಯಿಸಿದ್ದಾರೆ. ಕೃಷ್ಣಮಠಕ್ಕೆ ಹೊರೆಕಾಣಿಕೆ ಸಮರ್ಪಿಸುವ ಬ್ಗೆ ನಮಗೆ ಯಾವುದೇ ಮಾಹಿತಿ ನೀಡಿಲ್ಲ. ಮಠದ ವತಿಯಿಂದ ಹೊರೆ ಕಾಣಿಕೆ ನೀಡುವಂತೆ ಮನವಿ ಮಾಡಿಲ್ಲ. ಈ ವಿಚಾರದಲ್ಲಿ ಮುಸ್ಲಿಂ ಸೌಹಾರ್ಧ ಸಮಿತಿಯು ಗೊಂದಲ ಸೃಷ್ಟಿಸಲು ಹೊರಟಿದೆ. ದೇವರಿಗೆ ಶ್ರದ್ಧಾ ಭಕ್ತಿಯಿಂದ ಅರ್ಪಿಸುವ ಹೊರೆ ಕಾಣಿಕೆ ವಿಚಾರದಲ್ಲಿ ಸಮಿತಿ ನಿರ್ಧಾರವೇ ಅಂತಿಮವಾಗಿರುತ್ತದೆ. ಮುಸ್ಲಿಂ ಸೌಹಾರ್ಧ ಸಮಿತಿಯ ಪತ್ರಿಕಾಗೋಷ್ಟಿಗೂ ಸ್ವಾಗತ ಸಮಿತಿಗೂ ಯಾವುದೇ ಸಂಬAಧವಿಲ್ಲ ಎಂದು ಸ್ಪಷ್ಟಪಡಿಸಿದರು.
ಮುಸ್ಲಿಂ ಸೌಹಾರ್ಧ ಸಮಿತಿಯ ಹೊರೆ ಕಾಣಿಕೆ ಮೆರವಣಿಗೆ ವೇಳೆ ದಫ್ ನಡೆಸಲು ತೀರ್ಮಾನಿಸಿದ್ದು, ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಪ್ರಯತ್ನ. ಹೀಗಾಗಿ ಸೂಕ್ಷö್ಮ ವಿಚಾರಗಳಲ್ಲಿ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ ಎಂದರು.