-->
 ತುಳು ಬರಹಗಳ ಗುಚ್ಚ "ಕಡ್ಲೆ ಬಜಿಲ್" ಪುಸ್ತಕ ಬಿಡುಗಡೆ

ತುಳು ಬರಹಗಳ ಗುಚ್ಚ "ಕಡ್ಲೆ ಬಜಿಲ್" ಪುಸ್ತಕ ಬಿಡುಗಡೆ


ಕದ್ರಿ ಶ್ರೀ ಮಂಜುನಾಥನ ಜಾತ್ರಾ ಮಹೋತ್ಸವದ ಶುಭಾವಸರದಲ್ಲಿ ರಥೋತ್ಸವದ ಪುಣ್ಯ ದಿನ 21 ರಂದು ಪ್ರಖ್ಯಾತ ಹರಿದಾಸರು, ನಿರೂಪಕರು ಮತ್ತು ಅಂಕಣ ಬರಹಗಾರರಾದ ಶರತ್ ಶೆಟ್ಟಿ ಪಡುಪಳ್ಳಿಯವರ ತುಳು ಬರಹಗಳ ಗುಚ್ಚ “ ಕಡ್ಲೆ ಬಜಿಲ್” ಎಂಬ ಪುಸ್ತಕವು ಕದ್ರಿ ದೇವಳದ ರಾಜಾಂಗಣದಲ್ಲಿ ಬಿಡುಗಡೆಗೊಂಡಿತು. 

ಮಲ್ಲಿಕಾ ಕಲಾ ವೃಂದದ ಸಂಚಾಲಕರಾದ ಸುಧಾಕರ್ ರಾವ್ ಪೇಜಾವರ, ಹಿರಿಯ ಲೇಖಕಿ, ಲೇಖಕಿಯರ ವಾಚಕಿಯರ ಸಂಘದ ರೂಪಕಲಾ ಆಳ್ವ, ಪ್ರಸಿದ್ಧ ತುಳು ಸಾಹಿತಿ  ಕುಶಾಲಾಕ್ಷಿ ವಿ ಕುಲಾಲ್ ಕಣ್ವತೀರ್ಥ ಮತ್ತಿತರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಈ ತುಳು ಬರಹದ ಪುಸ್ತಕಕ್ಕೆ ಮುನ್ನುಡಿ ಬರೆದ ರೂಪಕಲಾ ಆಳ್ವಾ ಅವರು ಮಾತನಾಡಿ,  ಇದು ನಮ್ಮ ತುಳುವರ ದಿನನಿತ್ಯದ ಕಷ್ಟ ಸುಖಗಳ ಬಗೆಗೆ, ಹಬ್ಬ ಹರಿದಿನಗಳ ಬಗೆಗೆ, ಊರಿನ ಜಾತ್ರೆ ಸಡಗರಗಳ ಬಗೆಗೆ ಮತ್ತು ಹಿಂದೆ ಕಳೆದ ಬಾಲ್ಯದ ಬಗೆಗಿನ ನೆನಪು ಹುಟ್ಟಿಸುವ ಉತ್ತಮ ವಿಚಾರಗಳನ್ನು ಹೊಂದಿದ ಒಂದು ಸಮಗ್ರ  ಲೇಖನ ಮಾಲೆ. ಹಾಗಾಗಿ ಆಸಕ್ತರು ಖರೀದಿಸಿ ಓದಿದರೆ ಹಿಂದಿನ “ಕಡ್ಲೆಬಜಿಲ್” ಸವಿದ ರುಚಿ ನೀಡುವುದು ಗ್ಯಾರಂಟಿ ಎಂದರು. 

ಸುಧಾಕರ್ ರಾವ್ ಮಾತನಾಡಿ, ಶರತ್ ಶೆಟ್ಟಿ ಅವರ ಹರಿಕಥೆಯಂತೆ ಈ ಪುಸ್ತಕವೂ ಲೋಕನೀತಿಯ ವಿಚಾರಗಳ ಒಂದು ಗುಚ್ಚ ಎಂದು ವಿವರಿಸಿ ಶುಭ ಹಾರೈಸಿದರು. ಶರತ್ ಶೆಟ್ಟಿ ವಂದಿಸಿದರು. ಈ  ಪುಸ್ತಕದ ಮುಖ ಬೆಲೆ 200 ರೂಪಾಯಿಯಾಗಿದ್ದು ಆಸಕ್ತಿ ಇರುವವರು 9845960051 ಗೆ ವಾಟ್ಸಪ್ಪ್ ಆಪ್ ಮೆಸೇಜ್ ಕಳುಹಿಸಿ  ಸಂಪರ್ಕಿಸಬಹುದು.  


Ads on article

Advertise in articles 1

advertising articles 2

Advertise under the article