-->
ಕುಂದಾಪುರ ಬಸ್-ಟಿಪ್ಪರ್ ಅಪಘಾತ ಪ್ರಕರಣ; ಮೂವರ ವಿರುದ್ಧ ಕೇಸ್, ಓರ್ವನ ಬಂಧನ

ಕುಂದಾಪುರ ಬಸ್-ಟಿಪ್ಪರ್ ಅಪಘಾತ ಪ್ರಕರಣ; ಮೂವರ ವಿರುದ್ಧ ಕೇಸ್, ಓರ್ವನ ಬಂಧನ


ಕುಂದಾಪುರ ಶೆಟ್ರಕಟ್ಟೆ ಎಂಬಲ್ಲಿ ನಡೆದ ಟಿಪ್ಪರ್-ಸರ್ಕಾರಿ ಬಸ್ ಅಪಘಾತ ಪ್ರಕರಣಕ್ಕೆ ಸಂಬOಧಿಸಿ ಟಿಪ್ಪರ್ ಚಾಲಕ ಸೇರಿ ಮೂವರ ವಿರುದ್ಧ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪೈಕಿ ಟಿಪ್ಪರ್ ಲಾರಿಗೆ ಮಣ್ಣು ನೀಡಿದ 3ನೇ ಆರೋಪಿ ಶ್ರೀಧರ ಶೇರೆಗಾರ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಟಿಪ್ಪರ್ ಚಾಲಕ ರಾಘವೇಂದ್ರ  ಹಾಗೂ ಟಿಪ್ಪರ್ ಮಾಲಕ ಶ್ರೀಧರ್ ವಿರುದ್ಧ ಪ್ರಕರಣ ದಾಖಲಾಗಿದೆ. ಅಪಘಾತದಲ್ಲಿ ಗಾಯಗೊಂಡಿರುವ ಚಾಲಕ ರಾಘವೇಂದ್ರ ಚಿಕಿತ್ಸೆ ಪಡೆಯುತ್ತಿದ್ದಾನೆ. ಗುಲ್ವಾಡಿ ಗ್ರಾಮದ ಶೆಟ್ರಕಟ್ಟೆ ಎಂಬಲ್ಲಿ ಸರ್ಕಾರಿ ಬಸ್ಸಿಗೆ ಅತೀ ವೇಗದಿಂದ ಬಂದ ಮಣ್ಣು ಸಾಗಾಟದ ಟಿಪ್ಪರ್ ಡಿಕ್ಕಿಯಾಗಿ, ವಿದ್ಯಾರ್ಥಿಗಳು ಸೇರಿ 18 ಮಂದಿ ಗಾಯಗೊಂಡಿದ್ದರು. ಟಿಪ್ಪರ್ ಚಾಲಕನು ವಾಹನದ ಪರವಾನಿಗೆ ನಿಯಮ ಉಲ್ಲಂಘಿಸಿ ಮಿತಿ ಮೀರಿದ ಮಣ್ಣನು ಟಿಪ್ಪರ್‌ನಲ್ಲಿ ತುಂಬಿಸಿಕೊOಡು ಕಿರಿದಾದ ರಸ್ತೆಯಲ್ಲಿ ಓಡಿಸಿರುವುದರಿಂದ ಅಪಘಾತ ನಡೆದಿದೆ ಎನ್ನಲಾಗಿದೆ. 

ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ : 01/2026 ಕಲಂ: 110, 303(2) BNS & 4(1A), 21(4) MMRD Act & 183, 146, 192 182 IMV Actರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಂಧಿತ ಆರೋಪಿ ಶ್ರೀಧರ ಶೇರೆಗಾರನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದ. 


Ads on article

Advertise in articles 1

advertising articles 2

Advertise under the article