ಶೀರೂರು ಶ್ರೀಗಳಿಂದ ಕಡೆಗೋಲು ಕೃಷ್ಣನಿಗೆ ಪ್ರಥಮ ಪೂಜೆ
Sunday, January 18, 2026
ಪರ್ಯಾಯ ಪೀಠವನ್ನು ಅಲಂಕರಿಸಿರುವ ಶೀರೂರು ಮಠದ ಯತಿ ವೇದ ವರ್ಧನ ಶ್ರೀಗಳು ಇಂದು ಶ್ರೀಕೃಷ್ಣನಿಗೆ ಪ್ರಥಮ ಪೂಜೆ ನೆರವೇರಿಸಿದರು.
ಚಿನ್ನದ ಪಲ್ಲಕ್ಕಿಯಲ್ಲಿ ರಥಬೀದಿಗೆ ತಲುಪಿದ ನಂತರ ಪಲ್ಲಕ್ಕಿಯಿಂದ ಇಳಿದು, ಶ್ರೀ ಚಂದ್ರಮೌಳೇಶ್ವರ ಮತ್ತು ಶ್ರೀ ಅನಂತೇಶ್ವರ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ನಂತರ ಶ್ರೀ ಕೃಷ್ಣ ಮಠಕ್ಕೆ ಪ್ರವೇಶಿಸಿ, ಶ್ರೀ ಕೃಷ್ಣ, ಮುಖ್ಯಪ್ರಾಣ, ಶ್ರೀ ಮಧ್ವಾಚಾರ್ಯರ ಮತ್ತು ಗರುಡ ದೇವರ ದರ್ಶನ ಪಡೆದರು.

