ಕಾಂಗ್ರೆಸ್ ಕಾನೂನು, ಮಾನವ, ಮಾಹಿತಿ ಹಕ್ಕು ವಿಭಾಗ ಪ್ರಧಾನ ಕಾರ್ಯದರ್ಶಿಯಾಗಿ ಹಬೀಬ್ ಅಲಿ ನೇಮಕ
Thursday, January 01, 2026
ಉಡುಪಿಯ ವಕೀಲರು, ಕೆಪಿಸಿಸಿ ಸಂಯೋಜಕರಾದ ಹಬೀಬ್ ಅಲಿ ಖಾದರ್ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾನೂನು, ಮಾನವ ಹಕ್ಕು ಮತ್ತು ಮಾಹಿತಿ ಹಕ್ಕು ವಿಭಾಗಕ್ಕೆ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ಹಬೀಬ್ ಅಲಿ ಖಾದರ್ ಇವರನ್ನು ಎಐಸಿಸಿ ಕಾನೂನು, ಮಾನವ ಹಕ್ಕು ಮತ್ತು ಮಾಹಿತಿ ಹಕ್ಕು ವಿಭಾಗದ ಅಧ್ಯಕ್ಷರಾದ ಡಾ ಅಭಿಷೇಕ್ ಮನು ಸಿಂಗ್ವಿ ರವರ ಆದೇಶ ದ ಮೇರೆಗೆ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ. ಕೆ ಶಿವಕುಮಾರ್ ಅವರ ಅನುಮೋದನೆ ಯೊಂದಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾನೂನು, ಮಾನವ ಹಕ್ಕು ಮತ್ತು ಮಾಹಿತಿ ಹಕ್ಕು ವಿಭಾಗ ದ ಅಧ್ಯಕ್ಷರಾದ ಸಿ ಎಮ್ ಧನಂಜಯ ರವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾನೂನು, ಮಾನವ ಹಕ್ಕು ಮತ್ತು ಮಾಹಿತಿ ಹಕ್ಕು ವಿಭಾಗಕ್ಕೆ ಪ್ರಧಾನ ಕಾರ್ಯದರ್ಶಿ ಯಾಗಿ ನೇಮಕ ಮಾಡಿದ್ದಾರೆ.