-->
 ಶ್ರೀ ಪುತ್ತಿಗೆ ಯತಿದ್ವಯರಿಗೆ ಪಣಿಯಾಡಿ  ಭಕ್ತರಿಂದ ಮೊದಲ ಅಭಿನಂದನೆ

ಶ್ರೀ ಪುತ್ತಿಗೆ ಯತಿದ್ವಯರಿಗೆ ಪಣಿಯಾಡಿ ಭಕ್ತರಿಂದ ಮೊದಲ ಅಭಿನಂದನೆ


ತಮ್ಮ ಚತುರ್ಥ ಶ್ರೀ ಕೃಷ್ಣ ಪೂಜಾ ಪರ್ಯಾಯವನ್ನು ಯಶಸ್ವಿಯಾಗಿ ಪೂರೈಸಿದ  ಶ್ರೀಪುತ್ತಿಗೆ ಯತಿದ್ವಯರು ಇಂದು ಕಡಿಯಾಳಿ ಶ್ರೀ ಮಹಿಷಮರ್ದಿನಿ ಅಮ್ಮನವರ ದರ್ಶನ ಪಡೆದು, ಪಣಿಯಾಡಿ ಅನಂತ ಪದ್ಮನಾಭ ಸನ್ನಿಧಾನಕ್ಕೆ ತೆರಳಿ ಅನಂತಾಸನನ ದರ್ಶನ ಪಡೆದರು.


ಇದಕ್ಕೂ ಮುನ್ನ ಸಾಲಂಕೃತ ತೆರೆದ ವಾಹನದಲ್ಲಿ ಯತಿದ್ವಯರನ್ನು ಮೆರವಣಿಗೆ ಮೂಲಕ ಭಕ್ತಿ ಗೌರವಗಳೊಂದಿಗೆ ಬರಮಾಡಿಕೊಳ್ಳಲಾಯಿತು. ಬಳಿಕ ಅನಂತ ವಿಪ್ರ ಬಳಗ ಮತ್ತು ಭಕ್ತ ವೃಂದದವರು ಆಯೋಜಿಸಿದ ಅಭಿನಂದನಾ ಸಮಾರಂಭ ದಲ್ಲಿ ಅಭಿನಂದನೆಯನ್ನು ಸ್ವೀಕರಿಸಿದರು.  ಪರ್ಯಾಯದ ಎಲ್ಲ ಕಾರ್ಯಕರ್ಮ ಗಳ ಯಶಸ್ಸಿನ ಹಿಂದೆ ಪಣಿಯಾಡಿ ಮಂದಿಯ ಶ್ರಮವನ್ನು ಸ್ಮರಿಸಿ  ಸಮಸ್ತ ಭಕ್ತರಿಗೆ ಶ್ರೇಯಸ್ಸಾಗಲಿ ಎಂದು ಹಾರೈಸಿದರು.


ಈ ವೇಳೆ ವಿಜಯ ರಾಘವ ರಾವ್,  ವಿಶ್ವನಾಥ ಭಟ್, ದೇವಳದ  ತಂತ್ರಿಗಳಾದ ಹಯವದನ ತಂತ್ರಿ ,ಅರ್ಚಕರಾದ ರಾಘವೇಂದ್ರ ಭಟ್ ,ಗುರುರಾಜಾಚಾರ್ಯ,ಗೋಪಾಲ ಕೃಷ್ಣ ಜೋಯಿಸರು ದಿವಾನರಾದ ನಾಗರಾಜಾಚಾರ್ಯ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ, ಕಾರ್ಯದರ್ಶಿ ರತೀಶ ತಂತ್ರಿ, ರಾಜೇಶ್ ಭಟ್, ನಾಗರಾಜ್ ಭಟ್ , ಚಂದ್ರಶೇಖರ ಶೆಟ್ಟಿ, ನಾರಾಯಣ ಮಡಿ, ಎಲ್ ಏನ್ ಹೆಗ್ಡೆ, ಭಾರತೀ ಕೃಷ್ಣಮೂರ್ತಿ ಹಾಗೂ ಸಮಿತಿಯ ಸರ್ವ ಸದಸ್ಯರು ಅನೇಕ ಭಕ್ತರು ಉಪಸ್ಥಿತರಿದ್ದರು.

ಪತಂಜಲಿ  ಯೋಗ ಸಮಿತಿಯ ಜಿಲ್ಲಾ ಪ್ರಭಾರಿ ರಾಘವೇಂದ್ರ ಭಟ್ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು. ನಂತರ ಉಭಯ ಶ್ರೀಪಾದರು ಶ್ರೀಪುತಿಗೆ ಮೂಲ ಮಠಕ್ಕೆ ತೆರಳಿ ಲಕ್ಷ್ಮಿ ನರಸಿಂಹ ದೇವರ ದರ್ಶನ ಪಡೆದುಕೊಂಡರು.









Ads on article

Advertise in articles 1

advertising articles 2

Advertise under the article