ಎಸ್.ಎಲ್ ಶೇಟ್ ಜ್ಯುವೆಲ್ಲರ್ಸ್ ಪಾಲುದಾರೆ ಪದ್ಮಾ ಆರ್. ಶೇಟ್ ನಿಧನ
Monday, January 05, 2026
ಮಂಗಳೂರಿನ ಕೆ.ಎಸ್ ರಾವ್ ರಸ್ತೆಯಲ್ಲಿರುವ ಪ್ರತಿಷ್ಟಿತ ಚಿನ್ನಾಭರಣ ಮಳಿಗೆ ಎಸ್.ಎಲ್ ಶೇಟ್ ಜ್ಯುವೆಲ್ಲರ್ಸ್ ಆಂಡ್ ಡೈಮಂಡ್ ಹೌಸ್ ಪಾಲುದಾರರಾದ ದಿ. ಎಂ. ರಘುನಾಥ ಶೇಟ್ ಅವರ ಪತ್ನಿ ಪದ್ಮಾ ಆರ್. ಶೇಟ್(76) ನಿಧನರಾಗಿದ್ದಾರೆ.
ದೈವಜ್ಞ ಬ್ರಾಹ್ಮಣ ಸಮಾಜದಲ್ಲಿ ಗುರುತಿಸಿಕೊಂಡಿದ್ದ ಪದ್ಮಾ ಆರ್. ಶೇಟ್ ಸರಳ ವ್ಯಕ್ತಿತ್ವದಿಂದ ಜನಾನುರಾಗಿಯಾಗಿದ್ದರು. ಮೃತರು ಮೂವರು ಪುತ್ರರಾದ ಖ್ಯಾತ ಉದ್ಯಮಿ ಎಂ. ಪ್ರಶಾಂತ್ ಶೇಟ್, ಹೇಮಂತ್ ಶೇಟ್, ಎಂ. ನಿಶಾಂತ್ ಶೇಟ್ ಹಾಗೂ ಪುತ್ರಿ ವೀಣಾ ಡಿ. ಶೇಟ್ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಮಣ್ಣಗುಡ್ಡೆಯ ಗಾಂಧಿನಗರದ ಲಕ್ಷ್ಮೀ ಸದನದಲ್ಲಿ ನಡೆಯಲಿದೆ.