ಹೋಟೆಲ್ ಪ್ರಕಾಶ್ ಮಾಲಕ ದೇವಾನಂದ ಸುವರ್ಣ ನಿಧನ
Saturday, January 03, 2026
ಮಂಗಳೂರಿನ ಹಂಪನಕಟ್ಟೆಯ ಹೋಟೆಲ್ ಪ್ರಕಾಶ್ ಮಾಲಕ, ಮಂಗಳೂರು ಬಾರೆಬೈಲ್ ವ್ಯಾಸನಗರ ನಿವಾಸಿ ದೇವಾನಂದ ಸುವರ್ಣ (73) ನಗರದ ಖಾಸಗಿ ಆಸ್ಪತ್ರೆಯಲ್ಲಿ ಜನವರಿ 3ರಂದು ನಿಧನರಾದರು.
ಅವರು ಪತ್ನಿ, ಯುವ ಜನತಾದಳ ಜಿಲ್ಲಾ ಅಧ್ಯಕ್ಷ ಅಕ್ಷಿತ್ ಸುವರ್ಣ ಸಹಿತ ಇಬ್ಬರು ಪುತ್ರರನ್ನು ಅಗಲಿದ್ದಾರೆ. ದೇವಾನಂದ ಅವರ ನಿಧನಕ್ಕೆ ಸಂಘ ಸಂಸ್ಥೆಗಳ ಮುಖಂಡರು ಹಾಗೂ ರಾಜಕೀಯ ಪ್ರಮುಖರು ಸಂತಾಪ ಸೂಚಿಸಿದ್ದಾರೆ.