ಕೋಝಿಕ್ಕೋಡ್ ದೀಪಕ್ ಆತ್ಮಹತ್ಯೆ ಪ್ರಕರಣ; ಕಂಟೆಂಟ್ ಕ್ರೀಯೇಟರ್ ಯುವತಿ ಬಂಧನ
ಕೇರಳದ ಕೊಝಿಕ್ಕೋಡ್ ನ ಬಸ್ಸಿನಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾನೆಂದು ಆರೋಪಿಸಿ ವಿಡಿಯೋ ಹರಿಯಬಿಟ್ಟು ಯುವಕನೊಬ್ಬನ ಸಾವಿಗೆ ಕಾರಣಳಾದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸೋಶಿಯಲ್ ಮೀಡಿಯಾ ಕಂಟೆOಟ್ ಕ್ರಿಯೇಟರ್ ಶಿಮ್ಜಿತಾ ಮುಸ್ತಫಾ ಎಂಬಾಕೆಯನ್ನು ಪೊಲೀಸರು ವಟಕಾರದಲ್ಲಿರುವ ಸಂಬOಧಿಕರ ಮನೆಯಲ್ಲಿ ಪತ್ತೆ ಹಚ್ಚಿ ಬಂಧಿಸಿದ್ದಾರೆ. ಕೊಯಿಂಲಾಡಿ ತಾಲ್ಲೂಕು ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಪೂರ್ಣಗೊಳಿಸಿದ ನಂತರ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಗಾಮೆಂಟ್ ಕಂಪನಿಯೊOದರಲ್ಲಿ ಕೆಲಸಕ್ಕಿದ್ದ ದೀಪಕ್ ಬೆಳಗ್ಗೆ ಮಂಕಾವಿನಲ್ಲಿರುವ ತಮ್ಮ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಬಸ್ ಪ್ರಯಾಣದ ಸಮಯದಲ್ಲಿ ದೀಪಕ್ ತನ್ನ ಜೊತೆ ದುರ್ವರ್ತನೆ ತೋರಿಸಿದ್ದಾರೆ ಎಂದು ಆರೋಪಿಸಿ ಶಿಮ್ಜಿತಾ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಳು. ಆ ವಿಡಿಯೋ ವೈರಲ್ ಆಗಿದ್ದು, ಇದರಿಂದ ಮನನೊಂದು ದೀಪಕ್ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ಇಡೀ ದೇಶದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನಲೆ ಅರೀಕೋಡ್‌ನ ಮಾಜಿ ಪಂಚಾಯತ್ ಸದಸ್ಯೆ ಶಿಮ್ಜಿತಾ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿತ್ತು. ಅಲ್ಲದೆ ನಿರೀಕ್ಷಣಾ ಜಾಮೀನು ಕೋರಿ ಕೋಝಿಕ್ಕೋಡ್ ಜಿಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ಪೊಲೀಸರು ಪ್ರಕರಣ ದಾಖಲಿಸಿದ ನಂತರ, ಅವರು ತಲೆಮರೆಸಿಕೊಂಡಿದ್ದರಿOದ, ಅಧಿಕಾರಿಗಳು ಹುಡುಕಾಟವನ್ನು ತೀವ್ರಗೊಳಿಸಿದರು. ಅವರು ದೇಶ ಬಿಟ್ಟು ಹೋಗದಂತೆ ತಡೆಯಲು ಲುಕ್‌ಔಟ್ ನೋಟಿಸ್ ಸಹ ಹೊರಡಿಸಲಾಗಿತ್ತು.