-->
 ಪರಶುರಾಮ ಥೀಮ್ ಪಾರ್ಕ್ ತಾಮ್ರ ತಗಡು ಕಳ್ಳತನ: ಸುನಿಲ್ ಕುಮಾರ್ ಆಕ್ರೋಶ

ಪರಶುರಾಮ ಥೀಮ್ ಪಾರ್ಕ್ ತಾಮ್ರ ತಗಡು ಕಳ್ಳತನ: ಸುನಿಲ್ ಕುಮಾರ್ ಆಕ್ರೋಶ


ಕಾರ್ಕಳ ತಾಲೂಕಿನ ಬೈಲೂರು ಉಮಿಕಲ್ ಬೆಟ್ಟದಲ್ಲಿರುವ ಪರಶುರಾಮ ಥೀಮ್ ಪಾರ್ಕ್ನಲ್ಲಿ ಮೇಲ್ಚಾವಣಿಯ ತಾಮ್ರದ ತಗಡುಗಳು ಕಳ್ಳತನವಾಗಿರುವ ಘಟನೆಗೆ ಸಂಬOಧಿಸಿ, ಮಾಜಿ ಸಚಿವ ಹಾಗೂ ಶಾಸಕ ವಿ. ಸುನಿಲ್ ಕುಮಾರ್ ಸುಮಾರು ಎರಡೂವರೆ ವರ್ಷಗಳ ಬಳಿಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅವ್ಯವಹಾರ ಹಾಗೂ ರಾಜಕೀಯ ವಿವಾದಗಳಿಂದ ಸಾರ್ವಜನಿಕ ಪ್ರವೇಶಕ್ಕೆ ಮುಚ್ಚಲ್ಪಟ್ಟಿರುವ ಥೀಮ್ ಪಾರ್ಕ್ ಗಿಡಗಂಟಿಗಳಿOದ ಪಾಳುಬಿದ್ದಿದ್ದು, ಈ ಸ್ಥಿತಿ ಕಂಡು ತೀವ್ರ ಬೇಸರ ವ್ಯಕ್ತಪಡಿಸಿದ ಸುನಿಲ್ ಕುಮಾರ್, ಬಾಗಿಲು ಒಡೆದು ಒಳನುಗ್ಗಿ ಮೇಲ್ಚಾವಣಿಯ ತಾಮ್ರದ ಹಲಗೆಗಳನ್ನು ಕಿತ್ತುಕೊಂಡಿದ್ದಾರೆ. ಇದು ಕಾರ್ಕಳದ ಇತಿಹಾಸಕ್ಕೆ ದುರ್ದೈವ. ಕಳ್ಳತನಕ್ಕೆ ಕಾಂಗ್ರೆಸ್ ಪ್ರತ್ಯಕ್ಷ ಪರೋಕ್ಷವಾಗಿ ಕಾರಣ, ಬಿಜೆಪಿ ಸರ್ಕಾರ ಮಂಜೂರು ಮಾಡಿದ ಸುಮಾರು ನಾಲ್ಕೂವರೆ ಕೋಟಿ ರೂ. ಅನುದಾನ ಇನ್ನೂ ಬಿಡುಗಡೆ ಆಗಿಲ್ಲ. ತಕ್ಷಣ ಹಣ ಬಿಡುಗಡೆ ಮಾಡಿ, ಥೀಮ್ ಪಾರ್ಕ್ ಅನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು, ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಜನವರಿ 11ರಂದು ಸಾವಿರಾರು ಬಿಜೆಪಿ ಕಾರ್ಯಕರ್ತರೊಂದಿಗೆ ಸ್ವಚ್ಛತಾ ಕಾರ್ಯ ನಡೆಸಲಾಗುವುದು. ಮಕರ ಸಂಕ್ರಾOತಿಯಿOದ ಒಂದು ತಿಂಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಇದು ನನ್ನ ಕನಸಿನ ಯೋಜನೆ. ಪ್ರವಾಸೋದ್ಯಮದ ದೃಷ್ಟಿಯಿಂದ ವಿಜೃಂಭಿಸಬೇಕಿದ್ದ ಸ್ಥಳ ರಾಜಕೀಯ ಅಸೂಯೆಯಿಂದ ಪಾಳಾಗಿದೆ ಎಂದು ಸುನಿಲ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.





Ads on article

Advertise in articles 1

advertising articles 2

Advertise under the article