ಲಯನ್ಸ್ ‘ಹಸಿವು ನಿವಾರಣಾ ಸೇವಾ ಸಪ್ತಾಹ’ದ ಸಮಾರೋಪ: ಜಾಗೃತಿ ಜಾಥಾ (Video)
ಲಯನ್ಸ್ ಜಿಲ್ಲೆ 317ಸಿ ವತಿಯಿಂದ 4 ಕಂದಾಯ ಜಿಲ್ಲೆಗಳ ವ್ಯಾಪಿಯ 114 ಕ್ಲಬ್‌ಗಳಲ್ಲಿ ಜ.3ರಿಂದ 11ರವರೆಗೆ ಹಮ್ಮಿಕೊಂಡ ಹಸಿವು ನಿವಾರಣಾ ಸೇವಾ ಸಪ್ತಾಹ ಪ್ರಯುಕ್ತ ಶನಿವಾರ ಉಡುಪಿ ನಗರದಲ್ಲಿ ಜಾಗೃತಿ ಜಾಥಾ ನಡೆಯಿತು.
ಉಡುಪಿಯ ಸರ್ವಿಸ್ ಬಸ್ ನಿಲ್ದಾಣದ ಮುಂಭಾಗದ ಕ್ಲಾಕ್‌ಟವರ್‌ನಿಂದ ಅಜ್ಜರಕಾಡು ಭುಜಂಗ ಪಾರ್ಕ್ ವರೆಗೆ ನಡೆದ ಈ ಜಾಗೃತಿ ಜಾಥಾಕ್ಕೆ ಲಯನ್ಸ್ 317ಸಿ ಜಿಲ್ಲಾ ಗವರ್ನರ್ ಸಪ್ನಾ ಸುರೇಶ್ ಚಾಲನೆ ನೀಡಿದರು.
ನಂತರ ಭುಜಂಗಪಾರ್ಕ್ ನಲ್ಲಿ ನಡೆದ ಸಮಾರೋಪದಲ್ಲಿ ಸಮಾರಂಭದಲ್ಲಿ ಲಯನ್ಸ್ 317ಸಿ ಜಿಲ್ಲಾ ಗವರ್ನರ್ ಸಪ್ನಾ ಸುರೇಶ್ ಮಾತನಾಡಿದ ಅವರು, ಜಾಗತಿಕ ಮಟ್ಟದಲ್ಲಿ ಹಮ್ಮಿಕೊಂಡ ಈ ಹಸಿರು ನಿವಾರಣಾ ಸೇವಾ ವಾರವನ್ನು ಲಯನ್ಸ್ ಜಿಲ್ಲೆ 317ಸಿಯ 4 ಕಂದಾಯ ಜಿಲ್ಲೆಗಳ ವ್ಯಾಪ್ತಿಯಲ್ಲಿ 113 ಲಯನ್ಸ್ ಕ್ಲಬ್‌ಗಳ ಸುಮಾರು 3,000ಕ್ಕೂ ಅಧಿಕ ಸದಸ್ಯರುಗಳ ಮೂಲಕ ಯಶಸ್ವಿಯಾಗಿ ನಡೆಸಲಾಗಿದೆ. ಪ್ರತಿಯೊಂದು ಕ್ಲಬ್ ತನ್ನ ಕಾರ್ಯ ವ್ಯಾಪ್ತಿಯಲ್ಲಿ ಸಮುದಾಯ ಅಡುಗೆಮನೆ, ಬಿಸಿ ಊಟ ಸೇವೆ, ಸರಕಾರಿ ಶಾಲಾ ಮಕ್ಕಳಿಗೆ ಉಪಹಾರ, ಹಣ್ಣುಗಳ ಕಿಟ್ ವಿತರಣೆ, ಪಾಲಕರಿಗೆ ಪೌಷ್ಠಿಕ ಆಹಾರ ಕುರಿತು ಜಾಗೃತಿ. ರೇಷನ್ ಕಿಟ್ ವಿತರಣೆ, ವೃದ್ಧಾಶ್ರಮಗಳಿಗೆ, ಸರಕಾರಿ ಆಸ್ಪತ್ರೆಗಳಲ್ಲಿ ಆಹಾರ ವಿತರಣೆ ಸೇರಿದಂತೆ ವಿವಿಧ ಸೇವಾ ಕಾರ್ಯಗಳನ್ನು ನಡೆಸಲಾಗಿದೆ ಎಂದರು.
ಲಯನ್ಸ್ ಕ್ಲಬ್ ಮಣಿಪಾಲದ ಡಾ.ಗಣೇಶ್ ಪೈ ಮಾತನಾಡಿ, ಅಭಿಯಾನದ ಅಂಗವಾಗಿ ಲಯನ್ಸ್ ಜಿಲ್ಲೆಯ ವಿವಿಧ ಕ್ಲಬ್‌ಗಳ ಮೂಲಕ 1 ಲಕ್ಷಕ್ಕೂ ಅಧಿಕ ಮಂದಿಗೆ ಆಹಾರ ವಿತರಣೆ ಮಾಡಲಾಗಿದೆ ಎಂದರು.
ಐಎಂಎ ಯ ಉಡುಪಿ ಕರಾವಳಿ ಅಧ್ಯಕ್ಷ ಡಾ.ಅಶೋಕ್ ಕುಮಾರ್ ಮಾತನಾಡಿ, ಅಪೌಷ್ಠಿಕತೆ ಸಮಸ್ಯೆ ಜಾಗತಿಕವಾಗಿ ಎಲ್ಲಾ ರಾಷ್ಟçಗಳನ್ನು ಕಾಡುತ್ತಿದೆ. ಆಹಾರ ಸಿಗದಿರುವುದು, ಸಿಕ್ಕಿದರೂ ಸರಿಯಾಗಿ ಸಿಗದಿರುವುದು ನಡೆದಿದೆ. ಸರಿಯಾದ ಸಮತೋಲನ ಆಹಾರದ ಸೇವನೆ ಅತ್ಯಗತ್ಯ. ಈ ಮೂಲಕ ಆರೋಗ್ಯವಂತ ಸಮಾಜದ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಿರುವ ಲಯನ್ಸ್ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.
ಐಎಂಎ ಮಹಿಳಾ ಘಟಕದ ಅಧ್ಯಕ್ಷೆ ಡಾ.ವಿಜಯಾ ಮಾತನಾಡಿ, ನಮ್ಮಲ್ಲಿ ಆಹಾರದ ಕೊರತೆಯಿಲ್ಲ, ಆದರೆ ಸಮಾನವಾಗಿ ಹಂಚಿಕೆಯಾಗಿಲ್ಲ. ಇಂದು ಭಾರತ ಜಗತ್ತಿನಲ್ಲಿಯೇ ಆಹಾರ ಉತ್ಪಾದಿಸುವ ನಂ.1 ರಾಷ್ಟç ಎಂಬ ಹೆಗ್ಗಳಿಕೆ ಪಡೆದಿದೆ. ಶಾಲೆಯಲ್ಲಿ ನಡೆಯುತ್ತಿರುವ ಬಿಸಿ ಊಟದಿಂದಾಗಿ ಮಕ್ಕಳಿಗೆ ಅನುಕೂಲವಾಗಿದೆ. ಆಹಾರ ಗಳಿಸಲು ಸಾಧ್ಯವಾಗದವರಿಗೆ ನೆರವು ನೀಡುವ ಮೂಲಕ ಹಸಿವು ಮುಕ್ತ ಸಮಾಜದ ನಿರ್ಮಾಣ ಮಾಡಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಯೋಜಕ ಕೇಶವ ಅಮೀನ್, ಕಾರ್ಯದರ್ಶಿ ಶಾಲಿನಿ ಬಂಗೇರ, ಕೋಶಾಧಿಕಾರಿ ಶಶಿಧರ ಶೆಟ್ಟಿ, ಲಿಯೋ ಅಧ್ಯಕ್ಷ ಚಿರಾಗ್ ಪೂಜಾರಿ, ಲಯನ್ಸ್ ಕ್ಲಬ್ ಉಡುಪಿ ಅಧ್ಯಕ್ಷ ದಿನೇಶ್ ಕಿಣಿ, ಲಿಯೋ ಕ್ಲಬ್‌ಗಳ ಪದಾಧಿಕಾರಿಗಳು, ಧನ್ವಂತರಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

