ಸಾಸ್ತಾನ ಟೋಲ್ ಪ್ಲಾಝಾದಲ್ಲಿ ನಿವೃತ್ತ ಯೋಧನಿಗೆ ಅಪಮಾನ (Video)
Monday, January 26, 2026
ಉಡುಪಿ ಜಿಲ್ಲೆಯ ಸಾಸ್ತಾನ ಟೋಲ್ ಪ್ಲಾಝಾದಲ್ಲಿ ನಿವೃತ್ತ ಯೋಧರೊಬ್ಬರನ್ನು ವಿನಾ ಕಾರಣ ನಿಲ್ಲಿಸಿ ಅವಮಾನ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಆರ್ಮಿ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದ ಶ್ಯಾಮರಾಜ್ ಅವರು ತನಗಾದ ಅಪಮಾನವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊOಡಿದ್ದಾರೆ.
ಟೋಲ್ ಗೇಟ್ ನಲ್ಲಿ ಯೋಧರಿಗೆ ಟೋಲ್ ಫ್ರೀ ವ್ಯವಸ್ಥೆ ಇದೆ. ಇದಕ್ಕೆ ಬೇಕಾದ ಅಗತ್ಯ ದಾಖಲೆಗಳು ಶ್ಯಾಮರಾಜ್ ಅವರ ಬಳಿಯಿದ್ದರೂ ವೀಲ್ ಚೇರ್ ನಲ್ಲಿ ಬಂದಿದ್ದ ಅವರನ್ನು ವಿನಾ ಕಾರಣ ನಿಲ್ಲಿಸಿ ಅವಮಾನ ಮಾಡಲಾಗಿದೆ. ಸೂಕ್ತ ದಾಖಲೆ ತೋರಿಸಿದರೂ ಉದ್ಧಟತನ ಪ್ರದರ್ಶಿಸಿರುವ ಟೋಲ್ ಸಿಬ್ಬಂದಿಗಳ ವಿರುದ್ಧ ಆಕ್ರೋಶ ಕೇಳಿ ಬಂದಿದೆ. ದೇಶ ಸೇವೆಯಲ್ಲಿ ತೊಡಗಿಕೊಂಡು ಯುದ್ಧ ಸಂದರ್ಭದಲ್ಲಿ ತನ್ನ ಅಂಗ ವೈಕಲ್ಯ ಕಳೆದುಕೊಂಡು ವೀಲ್ ಚೇರ್ ನಲ್ಲಿ ಓಡಾಡುತ್ತಿರುವ ಯೋಧರೊಬ್ಬರಿಗೆ ಅವಮಾನ ಮಾಡಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲೂ ವ್ಯಾಪಕ ಟೀಕೆ ವ್ಯಕ್ತವಾಗಿದೆ.