-->
 ಮಾ. 1: ಮರಾಠಿ ಹೋಳಿ ಸಂಭ್ರಮ 2026

ಮಾ. 1: ಮರಾಠಿ ಹೋಳಿ ಸಂಭ್ರಮ 2026


ಉಡುಪಿ ಜಿಲ್ಲಾ ಮರಾಠಿ ಸಮಾಜ ಸೇವಾ ಸಂಘ ಕುಂಜಿಬೆಟ್ಟು ಇವರ ನೇತೃತ್ವದಲ್ಲಿ ಮರಾಠಿ ಹೋಳಿ ಸಂಭ್ರಮ 2026 ಕಾರ್ಯಕ್ರಮವನ್ನು ಮಾ. 1ರಂದು ಬ್ರಹ್ಮಾವರ ತಾಲೂಕಿನ ಚೇರ್ಕಾಡಿ ಗ್ರಾಮದ ಮುಂಡ್ಕಿನ ಜೆಡ್ಡು ಆರ್.ಕೆ ಪಾಟ್ಕರ್ ಶಾಲಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಸಂಚಾಲಕ ಉಮೇಶ್ ಎ. ನಾಯ್ಕ್
ಚೇರ್ಕಾಡಿ ತಿಳಿಸಿದ್ದಾರೆ. 

ಅವರು ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಉಡುಪಿ ಜಿಲ್ಲೆಯ ಸುಮಾರು 136 ಹತ್ತರಕಟ್ಟೆ( ಹತ್ತು ಸಮಸ್ತರ ಕಟ್ಟೆ)ಗಳ 3 ಸಾವಿರಕ್ಕೂ ಅಧಿಕ ಜನರು ಹೋಳಿ ಸಂಭ್ರಮದಲ್ಲಿ ಭಾಗಿಯಾಗಲಿದ್ದಾರೆ. ಶೃಂಗೇರಿ ಶಾರದಾ ಪೀಠದ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನAನ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದರು.

ಈವರೆಗೆ ಉಡುಪಿ ಜಿಲ್ಲೆಯ 136 ಹತ್ತರಕಟ್ಟೆ ಜನರು ಅವರವರ ಗ್ರಾಮಗಳಲ್ಲಿ ಹೋಳಿ ಸಂಭ್ರಮ ಆಚರಿಸುತ್ತಿದ್ದರು. ಆದರೆ ಈ ಬಾರಿ ಮೊದಲ ಬಾರಿಗೆ ಎಲ್ಲರೂ ಒಗ್ಗಟ್ಟಾಗಿ ಹೋಳಿ ಸಂಭ್ರಮಾಚರಣೆಯಲ್ಲಿ ಭಾಗಿಯಾಗುತ್ತಿದ್ದಾರೆ ಎಂದರು.

ಸುದ್ದಿಗೋಷ್ಟಿಯಲ್ಲಿ ಉಡುಪಿ ಜಿಲ್ಲಾ ಮರಾಠಿ ಸಮಾಜ ಸೇವಾ ಸಂಘ ಅಧ್ಯಕ್ಷ ಕೆ.ಟಿ ನಾಯ್ಕ್ ಚಾಂತಾರು, ವೆಂಕಟೇಶ್ ನಾಯ್ಕ್, ನಾರಾಯಣ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು. 




Ads on article

Advertise in articles 1

advertising articles 2

Advertise under the article