-->
 ಮಾ.1: ಮೊಗವೀರ ಕುಲಗುರುಗಳ ಪುತ್ಥಳಿ ನಿರ್ಮಾಣಕ್ಕೆ ಗುರುಪಾದ ಕಾಣಿಕೆ ಸಮರ್ಪಣೆ, ಬೈಕ್ ಜಾಥಾ

ಮಾ.1: ಮೊಗವೀರ ಕುಲಗುರುಗಳ ಪುತ್ಥಳಿ ನಿರ್ಮಾಣಕ್ಕೆ ಗುರುಪಾದ ಕಾಣಿಕೆ ಸಮರ್ಪಣೆ, ಬೈಕ್ ಜಾಥಾ


ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಮೊಗವೀರ ಸಮಾಜದ ಗುರುಪರಂಪರೆಯಲ್ಲಿ 9 ತಲೆಮಾರಿನ ಗುರುಗಳಾದ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ನಿರ್ಮಾಣದ ಸಲುವಾಗಿ ಸಾಮೂಹಿಕ ಗುರುಪಾದ ಕಾಣಿಕೆ ಸಮರ್ಪಣಾ ಸಮಾರಂಭ ಪ್ರಯುಕ್ತ ಬ್ರಹತ್ ಸಮಾವೇಶ ಹಾಗೂ ಬೈಕ್ ಜಾಥಾವು ಮಾರ್ಚ್ 1ರಂದು ನಡೆಯಲಿದೆ ಎಂದು ದ.ಕ ಮೊಗವೀರ ಮಹಾಜನ ಸಂಘ ಗೌರವ ಸಲಹೆಗಾರರಾದ ಡಾ| ಜಿ. ಶಂಕರ್ ತಿಳಿಸಿದ್ದಾರೆ. 


ಶ್ರೀ ಮಾಧವ ಮಂಗಲ ಪೂಜಾರ್ಯರ ಬೃಹತ್ ಕಂಚಿನ ಪುತ್ಥಳಿಯನ್ನು ಸುಮಾರು 3 ಕೋಟಿ ರೂಪಾಯಿ ವೆಚ್ಚದಲ್ಲಿ ಸರ್ವ ಸಮಾಜ ಭಾಂಧವರ ಸಹಕಾರದಿಂದ ದೇವಸ್ಥಾನದ ಆವರಣದಲ್ಲಿ ನಿರ್ಮಿಸುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಈ ಪುತ್ಥಳಿ ಪ್ರತಿಷ್ಠಾಪಣೆಯು ಸಮಾಜದ ಏಕತೆ, ಸ್ವಾಭಿಮಾನ ಹಾಗೂ ಗುರುಭಕ್ತಿಯ ಸಂಕೇತವಾಗಲಿದ್ದು, ಈ ಪುಣ್ಯ ಕಾರ್ಯಕ್ಕೆ ಎಲ್ಲಾ ಮೊಗವೀರ ಸಮಾಜ ಬಾಂಧವರು ತಮ್ಮ ಶಕ್ಯಾನುಸಾರ ಕಾಣಿಕೆ ನೀಡುವ ಉದ್ದೇಶದಿಂದ "ಸಾಂಕೇತಿಕವಾಗಿ ಸಾಮೂಹಿಕ ಗುರುವಾದ ಕಾಣಿಕೆ ಸಮರ್ಪಣಾ ಸಮಾರಂಭದ ಸಲುವಾಗಿ ಬೃಹತ್ ಸಮಾವೇಶ ಹಾಗೂ ಯುವ ಭಾಂದವರಿಗಾಗಿ ದ್ವಿಚಕ್ರ ವಾಹನ ಜಾಥಾ ಕಾರ್ಯಕ್ರಮವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ.

ಕಾರ್ಯಕ್ರಮದ ಅಂಗವಾಗಿ ದ್ವಿಚಕ್ರ ವಾಹನ ಜಾಥಾ ಹಮ್ಮಿಕೊಳ್ಳಲಾಗಿದ್ದು, ಮಾ. 1ರ ಬೆಳಿಗ್ಗೆ 9.30ಕ್ಕೆ ಜಾಥಾ ಪ್ರಾರಂಭವಾಗಲಿದ್ದು, ಶೀರೂರಿನಿಂದ ಕಾಪುವಿವರೆಗಿನ ಸಮಾಜ ಬಾಂಧವರು ಉತ್ತರ ಭಾಗದ ಪಾಂಗಾಳ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಆವರಣದಿಂದ ಹಾಗೂ ಉಪ್ಪಳದಿಂದ ಹೆಜಮಾಡಿಯವರೆಗಿನ ಬಾಂಧವರು ದಕ್ಷಿಣ ಭಾಗದ ಹೆಜಮಾಡಿ ಟೋಲ್ ಪ್ಲಾಜಾದಿಂದ ರಾಷ್ಟ್ರೀಯ ಹೆದ್ದಾರಿ 66 ಮೂಲಕ ಉಚ್ಚಿಲದ ದೇವಸ್ಥಾನವರೆಗೆ ಸಾಗಿ ಬರಲಿದ್ದಾರೆ. ಸುಮಾರು 2000ಕ್ಕೂ ಅಧಿಕ ದ್ವಿಚಕ್ರ ವಾಹನಗಳು ಭಾಗವಹಿಸುವ ನಿರೀಕ್ಷೆಯಿದ್ದು, ಶಿಸ್ತುಬದ್ಧವಾಗಿ ಹಾಗೂ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಜಾಥಾ ನಡೆಸಲಾಗುವುದು ಎಂದು ತಿಳಿಸಿದರು.

ಸಭಾ ಕಾರ್ಯಕ್ರಮ ಬೆಳಿಗ್ಗೆ 10.30ರಿಂದ ಉಚ್ಚಿಲದ ಶ್ರೀಮತಿ ಶಾಲಿನಿ ಡಾ. ಜಿ. ಶಂಕರ್ ಸಭಾಂಗಣದಲ್ಲಿ ನಡೆಯಲಿದ್ದು, ಕೇರಳದ ಉಪ್ಪಳದಿಂದ ಬೈಂದೂರು ತಾಲೂಕಿನ ಶೀರೂರುವರೆಗೆ ವ್ಯಾಪಿಸಿರುವ 336 ಮೊಗವೀರ ಗ್ರಾಮ ಸಭೆಗಳು ಹಾಗೂ ಕೂಡುಕಟ್ಟುಗಳು ಸೇರಿದಂತೆ ದೇಶ-ವಿದೇಶಗಳ ಮೊಗವೀರ ಸಂಘಟನೆಗಳಿAದ 10 ಸಾವಿರಕ್ಕೂ ಅಧಿಕ ಸಮಾಜ ಬಾಂಧವರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.

ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಮಾತನಾಡಿ, ಈ ಸಮಾರಂಭದಲ್ಲಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಸಹಯೋಗದೊಂದಿಗೆ 500ಕ್ಕೂ ಅಧಿಕ ಯುವಕರಿಂದ ಅಂಗಾOಗ ದಾನ ನೋಂದಣಿ ಕಾರ್ಯಕ್ರಮ ನಡೆಯಲಿದ್ದು, ಮುಂದಿನ ದಿನಗಳಲ್ಲಿ ಬೃಹತ್ ರಕ್ತದಾನ ಶಿಬಿರವನ್ನೂ ಆಯೋಜಿಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ್ ಸುವರ್ಣ, ಕುಲಗುರುಗಳ ಕಂಚಿನ ಪುತ್ಥಳಿ ನಿರ್ಮಾಣ ಸಮಿತಿ ಕಾರ್ಯಾಧ್ಯಕ್ಷ ಮನೋಜ್ ಸಾಲ್ಯಾನ್ ಉಳ್ಳಾಲ, ದ. ಕ. ಮೊಗವೀರ ಮಹಾಜನ ಸಂಘದ ಪ್ರ. ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಕೋಶಾಧಿಕಾರಿ ರತ್ನಾಕರ ಸಾಲ್ಯಾನ್ ಮಲ್ಪೆ, ಬಾರ್ಕೂರು ಹೋಬಳಿಯ ಸತೀಶ್ ಅಮೀನ್ ಬೆಣ್ಣೆಕುದ್ರು, ಬಗ್ವಾಡಿ ಹೋಬಳಿಯ ಉದಯ ಕುಮಾರ್ ಹಟ್ಟಿಯಂಗಡಿ, ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ರವೀಶ್ ಎಸ್. ಕೊರವಡಿ, ಪುತ್ಥಳಿ ನಿರ್ಮಾಣ ಸಮಿತಿ ಕೋಶಾಧಿಕಾರಿ ದಿನೇಶ್ ಎರ್ಮಾಳು, ಪ್ರಮುಖರಾದ ವಿನಯ್ ಕರ್ಕೇರ, ಮಲ್ಪೆ, ಸುಜಿತ್ ಸಾಲ್ಯಾನ್ ಮೂಲ್ಕಿ, ವಾಸುದೇವ ಸಾಲ್ಯಾನ್, ಸುಧಾಕರ್ ಕುಂದರ್, ಸತೀಶ್ ಕುಂದರ್ ಮಲ್ಪೆ, ಪವನ್ ಆನಂದ್ ಎರ್ಮಾಳು, ಯಜೇಶ್ ಕರ್ಕೇರ ಮಿತ್ರಬೆಟ್ಟು, ಕಿಶೋರ್ ಡಿ. ಸುವರ್ಣ ಮಲ್ಪೆ, ಕರುಣಾಕರ ಸಾಲ್ಯಾನ್ ಮಲ್ಪೆ, ಶಿವಾನಂದ್ ಕುಂದರ್ ಮಲ್ಪೆ ಮೊದಲಾದವರು ಉಪಸ್ಥಿತರಿದ್ದರು.


Ads on article

Advertise in articles 1

advertising articles 2

Advertise under the article