-->
ಉಡುಪಿ ಕಂಬಳಕರೆ ಶಂಕುಸ್ಥಾಪನೆ ಮಾ. 4ಕ್ಕೆ: ಜಿಲ್ಲಾಡಳಿತ ಸ್ಪಷ್ಟನೆ

ಉಡುಪಿ ಕಂಬಳಕರೆ ಶಂಕುಸ್ಥಾಪನೆ ಮಾ. 4ಕ್ಕೆ: ಜಿಲ್ಲಾಡಳಿತ ಸ್ಪಷ್ಟನೆ


ಉಡುಪಿ ಜಿಲ್ಲಾಡಳಿತ ಮತ್ತು ಯುವಜನ ಸಬಲೀಕರಣ ಇಲಾಖೆ ವತಿಯಿಂದ 80 ಬಡಗಬೆಟ್ಟು ಇಲ್ಲಿ ನಿರ್ಮಾಣಗೊಳ್ಳಲಿರುವ ಉಡುಪಿ ಕಂಬಳಕರೆಯ ಶಂಕುಸ್ಥಾಪನೆಯ ದಿನಾಂಕದ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಗೊಂದಲಕಾರಿ ಮಾಹಿತಿ ಪ್ರಕಟಗೊಳ್ಳುತ್ತಿದ್ದು, ಶಂಕುಸ್ಥಾಪನೆಯು ಮಾ. 4ರಂದೇ ನಡೆಯಲಿದೆ ಎಂದು ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ. 

ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾರ್ಚ್ 4 ರಂದು ಶಂಕುಸ್ಥಾಪನೆ ನೆರವೇರಿಸಲಿದ್ದು ಅಧ್ಯಕ್ಷತೆಯನ್ನು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ವಹಿಸಲಿದ್ದು ಜನಪ್ರತಿನಿಧಿಗಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಜಿಲ್ಲಾಡಳಿತ ಪ್ರಕಟಣೆ ತಿಳಿಸಿದೆ.

ಮಾ. 4ರ ದಿನಾಂಕದ ಹೊರತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ಬೇರೆ ಯಾವುದೇ ದಿನಾಂಕಕ್ಕೆ ಸಾರ್ವಜನಿಕರು ಗಮನ ನೀಡಬಾರದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.  

Ads on article

Advertise in articles 1

advertising articles 2

Advertise under the article