-->
 ಫೆ. 15: ಶ್ರೀ ಕೃಷ್ಣಮಠದಲ್ಲಿ ವೈಭವದ ಶಿವರಾತ್ರಿ ಆಚರಣೆ

ಫೆ. 15: ಶ್ರೀ ಕೃಷ್ಣಮಠದಲ್ಲಿ ವೈಭವದ ಶಿವರಾತ್ರಿ ಆಚರಣೆ


ಮಹಾ ಶಿವರಾತ್ರಿ ಪ್ರಯುಕ್ತ ಫೆಬ್ರುವರಿ 15ರಂದು ಉಡುಪಿಯ ಶ್ರೀ ಕೃಷ್ಣಮಠದಲ್ಲಿ ಸಂಜೆ 6 ಘಂಟೆಯಿOದ ಬೆಳಿಗ್ಗೆ 6 ಘಂಟೆಯ ತನಕ ಅಖಂಡ ಶಿವರಾತ್ರಿ ಉತ್ಸವ ನಡೆಯಲಿದೆ.

ಶಿವರಾತ್ರಿಯ ಸಂದರ್ಭದಲ್ಲಿ ವೈಭವದ ಆಚರಣೆಯನ್ನು ನಡೆಸಬೇಕೆಂದು  ಪರ್ಯಾಯ ಶೀರೂರು ಮಠಾಧೀಶರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಸಂಕಲ್ಪಿಸಿದ್ದಾರೆ. ಕೃಷ್ಣಮಠದ ರಾಜಾಂಗಣದಲ್ಲಿ ಫೆಬ್ರವರಿ 15 ಭಾನುವಾರದಂದು ಸಂಜೆ ಆರು ಘಂಟೆಯಿOದ ಮರುದಿನ ಮುಂಜಾನೆ ಆರು ಘಂಟೆಯ ತನಕ ನಿರಂತರ ಪೂಜೆ, ಪಾರಾಯಣ, ಉಪನ್ಯಾಸ, ಭಜನೆ ಕಾರ್ಯಕ್ರಮಗಳು ನಡೆಯಲಿವೆ.  ವಿಷ್ಣುಸಹಸ್ರನಾಮ ಪಾರಾಯಣ, ಶಿವ ಪಂಚಾಕ್ಷರಿ ಮಂತ್ರ ಜಪವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಠದ ದಿವಾನರಾದ ಡಾ. ಉದಯ ಕುಮಾರ ಸರಳತ್ತಾಯರು ತಿಳಿಸಿದ್ದಾರೆ. 

ಕಾರ್ಯಕ್ರಮದ ವಿವರ :

ಸಾಯಂಕಾಲ : 5.45-6.00 ಪೂಜೆ

6.00- 6.30 ಪರ್ಯಾಯ ಸ್ವಾಮಿಗಳ ಸಂದೇಶ 

6.30-7.00 ಪ್ರವಚನ

7.00 - 9.30 ಸಾಂಸ್ಕೃತಿಕ ಕಾರ್ಯಕ್ರಮ

9.30-10.00 ಪೂಜೆ

10.00 - 11.00 ಪ್ರವಚನ

11.00 - 12.30 ರುದ್ರ ಪಾರಾಯಣ, ವಿಷ್ಣು ಸಹಸ್ರನಾಮ ಪಾರಾಯಣ ಪೂಜೆ

12.30-2.30 ಕುಳಿತು ಭಜನೆ ಪೂಜೆ

2.30-4.00ಕುಣಿದು ಭಜನೆ

4.00-5.30 ರುದ್ರ ಪಾರಾಯಣ, ವಿಷ್ಣು ಸಹಸ್ರನಾಮ ಪಾರಾಯಣ ಪೂಜೆ. 


Ads on article

Advertise in articles 1

advertising articles 2

Advertise under the article