ಬೆನ್ಜ್ ಕಾರು- ಬೈಕ್ ಡಿಕ್ಕಿ; ಸವಾರರಿಬ್ಬರು ಗಂಭೀರ
Friday, February 06, 2026
ಬೆನ್ಜ್ ಕಾರು ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಸವಾರರಿಬ್ಬರು ಗಂಭೀರ ಗಾಯಗೊಂಡ ಘಟನೆ ಅತ್ತೂರು ಚರ್ಚ್ ಬಳಿ ನಡೆದಿದೆ.
ಬೈಕ್ ಸವಾರರಾದ ರುದ್ರೇಶ್ ಮತ್ತು ಹರೀಶ್ ಗಾಯಗೊಂಡವರು. ಇವರಿಬ್ಬರು ನಿಟ್ಟೆ ಇಂಜಿನಿಯರಿOಗ್ ಕಾಲೇಜಿನ ವಿದ್ಯಾರ್ಥಿಗಳು. ದೂಪದಕಟ್ಟೆಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಬೆನ್ಜ್ ಕಾರಿಗೆ ದೂಪದಕಟ್ಟೆಯತ್ತ ಸಾಗುತ್ತಿದ್ದ ವಿದ್ಯಾರ್ಥಿಗಳ ಬೈಕ್ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊOಡಿದ್ದು ಬೈಕ್ ರಸ್ತೆ ದಾಟಿ ಪೊದೆಗೆ ಉರುಳಿದೆ.
ಗಂಭೀರವಾಗಿ ಗಾಯಗೊಂಡ ಬೈಕ್ ಸವಾರರನ್ನು ಕಾರ್ಕಳ ರೋಟರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಕಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.