-->
ಉಡುಪಿಯ ಕಲ್ಸಂಕ ಬಳಿ ಬಾಯ್ತೆರೆದುಕೊಂಡಿರುವ ಕೊಳವೆ ಬಾವಿ

ಉಡುಪಿಯ ಕಲ್ಸಂಕ ಬಳಿ ಬಾಯ್ತೆರೆದುಕೊಂಡಿರುವ ಕೊಳವೆ ಬಾವಿ


ಉಡುಪಿಯ ಕಲ್ಸಂಕ  ಸಮೀಪದ ಕನಕ ಮಹಲ್ ಎಂದು ಕರೆಯಲ್ಪಡುವ ಪಾಳುಬಿದ್ದಿರುವ ಕಟ್ಟಡದ‌ ಬಳಿ ತೋಡಿಟ್ಟಿರುವ ಕೊಳವೆಬಾವಿಯೊಂದಿದ್ದು, ಮುಚ್ಚಳ ಇಲ್ಲದೆ ಅಪಾಯ ಆಹ್ವಾನಿಸುವ ಸ್ಥಿತಿಯಲ್ಲಿದೆ. 

ಶ್ರೀ ಕೃಷ್ಣ ಮಠದ ರಾಜಾಂಗಣ ಯಾತ್ರಿಕರ ವಾಹನ ನಿಲುಗಡೆ ಸ್ಥಳವನ್ನು ಸಂಪರ್ಕಿಸುವ ರಸ್ತೆ ಇಲ್ಲಿ‌ ಹಾದುಹೋಗುತ್ತದೆ. ಹೊರರಾಜ್ಯದಿಂದ ವಲಸೆ ಬಂದಿರುವ ಆಟಿಕೆ ಸಾಮಾಗ್ರಿ ಮಾರಾಟಗಾರ ಕುಟುಂಬಗಳು ಇಲ್ಲಿ ನೆಲೆಪಡೆದಿವೆ. ಅವರೊಂದಿಗಿರುವ ಚಿಕ್ಕಚಿಕ್ಕ ಮಕ್ಕಳು ಕೊಳವೆ ಬಾವಿಯ ಬಳಿಯಲ್ಲಿ ಆಟ ಆಡುವುದು ಕಂಡುಬರುತ್ತಿದೆ. ದುರಂತ ಸಂಭವಿಸುವ ಸಾಧ್ಯತೆ ಹೆಚ್ಚಾಗಿದ್ದು, ತಕ್ಷಣ ಜಿಲ್ಲಾಡಳಿತ, ನಗರಾಡಳಿತ, ತೆರದ ಕೊಳವೆ ಬಾವಿಗೆ ಮುಚ್ಚಳ ಅಳವಡಿಸುವಂತೆ ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಸಂಚಾಲಕ ನಿತ್ಯಾನಂದ‌ ಒಳಕಾಡುವರು ಆಗ್ರಹಪಡಿಸಿದ್ದಾರೆ.

Ads on article

Advertise in articles 1

advertising articles 2

Advertise under the article