ಉಡುಪಿಯ ಅನಂತೇಶ್ವರ, ಚಂದ್ರಮೌಳೀಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಆಚರಣೆ
Monday, February 16, 2026
ಉಡುಪಿಯ ಶ್ರೀಕೃಷ್ಣ ಮಠದ ರಥಬೀದಿಯಲ್ಲಿರುವ ಪುರಾತನ ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವಸ್ಥಾನಗಳಲ್ಲಿ ಮಹಾ ಶಿವರಾತ್ರಿಯ ಅಂಗವಾಗಿ ಮಹಾ ರಂಗಪೂಜೆ ಹಾಗೂ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಶಿವರಾತ್ರಿಯಂದು ಸಾಂಪ್ರದಾಯಿಕವಾಗಿ ಪುರಾತನ ಅನಂತೇಶ್ವರ ದೇಗುಲದಲ್ಲಿ ಧ್ವಜಾರೋಹಣ ಮತ್ತು ಕಲಶಾಭಿಷೇಕಗಳು ನಡೆದವು. ರಾತ್ರಿಯ ಸಮಯದಲ್ಲಿ ದೇವರಿಗೆ ವಿಶೇಷವಾದ ಮಹಾರಂಗಪೂಜೆ ಸಲ್ಲಿಕೆಯಾಯಿತು. ಅಲ್ಲದೇ ಚಂದ್ರಮೌಳೀಶ್ವರ ದೇವಸ್ಥಾನದಲ್ಲೂ ಶಿವರಾತ್ರಿ ಪ್ರಯುಕ್ತ ಇಡೀ ದೇವಸ್ಥಾನವನ್ನು ಆಕರ್ಷಕವಾಗಿ ಹೂವುಗಳಿಂದ ಅಲಂಕರಿಸಲಾಗಿತ್ತು. ಭಕ್ತರು ಸಾಲುಗಟ್ಟಿ ನಿಂತು ಶಿವನ ದರ್ಶನ ಪಡೆದರು ಹಾಗೂ ಜಾಗರಣೆಯ ಸಮಯದಲ್ಲಿ ವಿಶೇಷ ಪೂಜೆಗಳು ಮತ್ತು ಭಜನಾ ಕಾರ್ಯಕ್ರಮಗಳು ನಡೆದವು. ಪರ್ಯಾಯ ಶೀರೂರು ಪೀಠಾಧೀಶರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು, ಪುತ್ತಿಗೆ ಪೀಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾದರು.


.jpeg)
.jpeg)
