ಪಿಕಪ್ ವಾಹನ ಪಲ್ಟಿ: ಚಾಲಕ ಸಾವು
Thursday, February 12, 2026
ಪಿಕಪ್ ವಾಹನವೊಂದು ಪಲ್ಟಿಯಾಗಿ ಚಾಲಕ ಮೃತಪಟ್ಟ ಘಟನೆ ಉಪ್ಪಿನಂಗಡಿಯ ತೆಕ್ಕಾರು ಗ್ರಾಮದ ಕನರಾಜೆ ಎಂಬಲ್ಲಿ ನಡೆದಿದೆ.
ಪಿಕಪ್ ವಾಹನದಲ್ಲಿ ಸೆಂಟ್ರಿಂಗ್ ಕೆಲಸದ ಸಾಮಗ್ರಿಗಳನ್ನು ಸಾಗಿಸಲಾಗುತ್ತಿತ್ತು. ಈ ಸಂದರ್ಭ ಮೇಲ್ಭಾಗದ ರಸ್ತೆಯಿಂದ ವಾಹನ ಕೆಳಭಾಗದ ರಸ್ತೆಗೆ ಪಲ್ಟಿಯಾಗಿ ಬಿದ್ದಿದೆ. ಚಾಲಕ ಅಳಕ್ಕೆ ನಿವಾಸಿ ಹರಿಶ್ಚಂದ್ರ ಎಂಬವರ ಮಗ ಹೇಮಚಂದ್ರ (32) ಎಂಬವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಮ್ಮರಬ್ಬ (51) ಎಂಬವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಯ ಬಗ್ಗೆ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.