ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು
Friday, February 06, 2026
ಉಡುಪಿಯ ಶಿವಳ್ಳಿಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಒಳನುಗ್ಗಿದ ಕಳ್ಳರು ಏಳು ಲಕ್ಷ ರೂ.ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ.
ಅಮಿತಾ ಡ್ಯಾನಿಯಲ್ ಕರ್ಕಡ ಎಂಬವರು ಫೆ.3ರಂದು ಮಧ್ಯಾಹ್ನ 1:45ಕ್ಕೆ ಮನೆಯ ಬಾಗಿಲು ಮತ್ತು ಹೊರಗಿನ ಗೇಟಿಗೆ ಬೀಗ ಹಾಕಿ ತಾಯಿ ಮನೆಗೆ ಹೋಗಿದ್ದರು. ಫೆ.4ರಂದು ಮಧ್ಯಾಹ್ನ ಮನೆ ಬಾಗಿಲು ತೆರೆದಿರುವುದಾಗಿ ಪಕ್ಕದ ಮನೆಯವರು ದೂರವಾಣಿ ಮೂಲಕ ತಿಳಿಸಿದ್ದರು. ಅಮಿತಾ ಅವರು ಮರಳಿ ಬಂದು ನೋಡಿದಾಗ ಕಳ್ಳರು ಮನೆಯಲ್ಲಿದ್ದ 75 ಗ್ರಾಂ ತೂಕದ ಸುಮಾರು 7 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದರು. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.