ಬೀಡಿನಗುಡ್ಡೆಯಲ್ಲಿ ತ್ಯಾಜ್ಯ ಮರುಪೂರಣ ಕಾರ್ಖಾನೆ ನಿರ್ಮಾಣಕ್ಕೆ ಸ್ಥಳೀಯರ ವಿರೋಧ
Saturday, February 07, 2026
ಉಡುಪಿ ನಗರದ ಬೀಡಿನಗುಡ್ಡೆ ವೃತ್ತದಿಂದ ಅಲೆವೂರು ಸಂಪರ್ಕಿಸುವ ಮುಖ್ಯ ರಸ್ತೆ ಸನಿಹ ಕಸ ತ್ಯಾಜ್ಯಗಳನ್ನು ಮರುಪೂರಣಗೊಳಿಸುವ ಕಾರ್ಖಾನೆಯೊಂದು, ನಿರ್ಮಾಣದ ಹಂತದಲ್ಲಿದೆ. ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಬರುವ 35 ವಾರ್ಡುಗಳಲ್ಲಿ ಸಂಗ್ರಹಗೊOಡ ಕಸಗಳನ್ನು ಇಲ್ಲಿ ದಾಸ್ತಾನು ಇಟ್ಟು, ಹಂತ ಹಂತವಾಗಿ ನಿರ್ಮಾಣವಾಗುವ ಕಾರ್ಖಾನೆಯಲ್ಲಿ ಮರುಬಳಕೆಗೆ ಯೋಗ್ಯವಾದ ಕಚ್ಚಾವಸ್ತು, ಗೊಬ್ಬರ ಸಿದ್ಧಗೊಳಿಸಲಾಗುತ್ತದೆ.
ಯೋಜನೆ ಸಮಾಜಕ್ಕೆ ಪೂರಕವಾಗಿದ್ದರೂ, ನಗರ ಭಾಗದಲ್ಲಿ ಕಾರ್ಖಾನೆ ರೂಪಿಸುತ್ತಿರುವ ಅವೈಜ್ಞಾನಿಕವಾಗಿದೆ. ನಗರದಿಂದ ಹೊರ ವಲಯದಲ್ಲಿರುವ ಜನವಸತಿ ರಹಿತ ಪ್ರದೇಶದಲ್ಲಿ ಈ ಕಾರ್ಖಾನೆ ಸ್ಥಾಪಿಸುವುದು ವೈಜ್ಞಾನಿಕ ಕ್ರಮವಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಕಾರ್ಖಾನೆಯಿಂದ ಪರಿಸರ ಮಾಲಿನ್ಯ ಉಂಟಾಗುವುದು ಖಂಡಿತ ಎನಿಸಿದೆ. ಯಂತ್ರೋಪಕರಣಗಳ ಕರ್ಕಶ ಸದ್ದಿನಿಂದ ಶಬ್ಧ ಮಾಲಿನ್ಯವಾಗುದಲ್ಲದೆ, ಸಂಗ್ರಹಿಸಿಡುವ ಕಸ ತಾಜ್ಯಗಳಿಂದ ಗಬ್ಬು ವಾಸನೆ ಪರಿಸರದಲ್ಲಿ ಪಸರಿಸಿ ವ್ಯಾಧಿಗಳ ಹುಟ್ಟಿಗೆ ಕಾರಣವಾಗಬಹುದು.
ಇಂಧನದಿOದ ಕರ್ತವ್ಯ ನಿರ್ವಹಿಸುವ ಘನ ಯಂತ್ರಗಳು, ಹೊರಸೂಸುವ ಧೂಮದಿಂದ ವಾಯು ಮಾಲಿನ್ಯ ಉಂಟಾಗಿ ನಗರದ ಜನತೆಯು ಉಸಿರಾಡಲು ವಿಷಗಾಳಿಯನ್ನು ಸೇವಿಸಬೇಕಾದ ಎದುರಾಗುತ್ತದೆ. ಈ ಪ್ರದೇಶದಲ್ಲಿ ವಸತಿ ಸಮುಚ್ಚಯಗಳು, ವಸತಿಗಳು, ವಾಣಿಜ್ಯ ಕಟ್ಟಡಗಳು, ಶಿಕ್ಷಣ ಸಂಸ್ಥೆಗಳು, ಧಾರ್ಮಿಕ ಶೃದ್ಧಾಕೇಂದ್ರಗಳು, ವಲಸೆ ಕಾರ್ಮಿಕರ ಸಾವಿರಾರು ಜೋಪಡಿಗಳು ಇಲ್ಲಿವೆ. ನಗರ ಪ್ರದೇಶದಲ್ಲಿ ಮಾರಕ ಎನಿಸಿರುವ ಈ ಯೋಜನೆ ತಟಸ್ಥಗೊಳಿಸಬೇಕು. ಆಯಾಕಟ್ಟಿನ ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಲು ಸಮಾಜಸೇವಕ, ನಗರಸಭೆಯ ಮಾಜಿಸದಸ್ಯ ನಿತ್ಯಾನಂದ ಒಳಕಾಡುವರು ಆಗ್ರಹಪಡಿಸಿದ್ದಾರೆ. ಹಾಗೆಯೇ ಒಳಕಾಡುವರು ಪರಿಸರವಾದಿಗಳ, ಸಂಘ ಸಂಸ್ಥೆಗಳ, ಹಾಗೂ ನಾಗರಿಕ ಸಮಾಜದ ಬೆಂಬಲಪಡೆದು ಪ್ರತಿಭಟಿಸುವುದಾಗಿ ಎಚ್ಚರಿಸಿದ್ದಾರೆ.
