-->
 ಶಾರ್ಟ್ ಸರ್ಕ್ಯೂಟ್: ಮನೆಗೆ ಬೆಂಕಿ, ಅಪಾರ ಹಾನಿ

ಶಾರ್ಟ್ ಸರ್ಕ್ಯೂಟ್: ಮನೆಗೆ ಬೆಂಕಿ, ಅಪಾರ ಹಾನಿ


ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮನೆಗೆ ಬೆಂಕಿ ಹೊತ್ತಿಕೊಂಡ ಘಟನೆ ಬಂಟ್ವಾಳ ತಾಲೂಕಿನ ವೀರಕಂಬ ಗ್ರಾಮದ ಗಣೇಶ ಕೋಡಿ ಎಂಬಲ್ಲಿ ಸಂಭವಿಸಿದೆ. 

ರಾಜೇಶ್ವರಿ ಎಂಬವರಿಗೆ ಸೇರಿದ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಅವಘಡ ಸಂಭವಿಸಿದ್ದು, ಟಿವಿ, ಪ್ರಿಡ್ಜ್ ಸೇರಿದಂತೆ ಬೆಲೆಬಾಳುವ ವಸ್ತುಗಳು ಬೆಂಕಿಗಾಹುತಿಯಾಗಿದೆ. ಮನೆ ಮಾಲಕಿ ರಾಜೇಶ್ವರಿ ಮನೆಗೆ ಬಾಗಿಲು ಹಾಕಿ ಕೆಲಸಕ್ಕೆ ಹೋಗಿದ್ದ ಸಂದರ್ಭ ಮನೆ ಮಾಡಿನಿಂದ ಹೊಗೆಯಾಡುತ್ತಿರುವುದನ್ನು ಗಮನಿಸಿ ಬಾಗಿಲು ಮುರಿದು ನೋಡಿದಾಗ ಬೆಂಕಿ ಹೊತ್ತಿಕೊಂಡಿರುವುದು ಕಂಡು ಬಂದಿದೆ. ಕೂಡಲೇ ಸ್ಥಳೀಯರು ಬೆಂಕಿ ನಂದಿಸಿದ್ದಾರೆ. ಮನೆಯ ಕಾಗದಪತ್ರಗಳೂ ಮನೆಯಲ್ಲಿದ್ದ ಮಕ್ಕಳ ಶಾಲೆಯ ಪುಸ್ತಕ, ಬಟ್ಟೆ ಬರೆ ಎಲ್ಲವೂ ಬೆಂಕಿಗಾಹುತಿಯಾಗಿದೆ.




Ads on article

Advertise in articles 1

advertising articles 2

Advertise under the article