-->
ಸ್ಕೂಟರ್ ನ ಸೀಟ್ ತೆರೆದು ನಗದು ದೋಚಿದ ಕಳ್ಳರು

ಸ್ಕೂಟರ್ ನ ಸೀಟ್ ತೆರೆದು ನಗದು ದೋಚಿದ ಕಳ್ಳರು


ಬ್ರಹ್ಮಾವರ ಠಾಣಾ ವ್ಯಾಪ್ತಿಯ ಹಂದಾಡಿ ಗ್ರಾಮದಲ್ಲಿ ನಿಲ್ಲಿಸಿದ್ದ ಸ್ಕೂಟರ್ ನ ಸೀಟ್ ತೆರೆದು ಕಳ್ಳರು ನಗದು ದೋಚಿದ್ದಾರೆ.

ಫೆ. 13ರಂದು ರಾತ್ರಿ 7.15ರಿಂದ 8.30 ಮಧ್ಯೆ, ಬ್ರಹ್ಮಾವರದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಎದುರು ನಿಲ್ಲಿಸಿದ್ದ ಸ್ಕೂಟರ್‌ನ ಸೀಟನ್ನು ಯಾರೋ ಕಳ್ಳರು ತೆರೆದು, ಸೀಟಿನ ಕೆಳಭಾಗದ ಡಿಕ್ಕಿಯಲ್ಲಿ ಇಟ್ಟಿದ್ದ ಬ್ಯಾಗ್‌ನಲ್ಲಿದ್ದ ರೂ.83,800 ನಗದು ಹಣವನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ.

ಈ ಬಗ್ಗೆ ಕಚ್ಚೂರು ನಿವಾಸಿ ಸತೀಶ್ ಮೈಂದನ್ (45) ಅವರು ಬ್ರಹ್ಮಾವರ ಠಾಣೆಗೆ ದೂರು ನೀಡಿದ್ದಾರೆ.

ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 34/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 303(2) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Ads on article

Advertise in articles 1

advertising articles 2

Advertise under the article