-->
ನಿಷೇಧಾಜ್ಞೆ ನಡುವೆಯೇ ಕಂಬಳಕರೆಗೆ ಗುದ್ದಲಿ ಪೂಜೆ ನೆರವೇರಿಸಿದವರ ವಿರುದ್ಧ ಪ್ರಕರಣ ದಾಖಲು

ನಿಷೇಧಾಜ್ಞೆ ನಡುವೆಯೇ ಕಂಬಳಕರೆಗೆ ಗುದ್ದಲಿ ಪೂಜೆ ನೆರವೇರಿಸಿದವರ ವಿರುದ್ಧ ಪ್ರಕರಣ ದಾಖಲು


ಜಿಲ್ಲಾಡಳಿತದ ನಿಷೇಧಾಜ್ಞೆಯ ನಡುವೆಯೂ ಉಡುಪಿಯ 80 ಬಡಗುಬೆಟ್ಟು  ಗ್ರಾಮದ ಕಬ್ಯಾಡಿ, ತಟ್ಟೂರಿನ ಸರ್ವೇ ನಂ. 11/1 ರಲ್ಲಿ ಕಂಬಳಕರೆಗೆ ಗುದ್ದಲಿ ಪೂಜೆ ನೆರವೇರಿಸಿರುವವರ ವಿರುದ್ಧ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ತಹಶೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿ ಪಿ ಆರ್‌ ಗುರುರಾಜ್‌ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

ಶಾಸಕರಾದ ಗುರ್ಮೆ ಸುರೇಶ್‌ ಶೆಟ್ಟಿ, ಯಶ್‌ ಪಾಲ್‌ ಸುವರ್ಣ, ಸುನಿಲ್‌ ಕುಮಾರ್‌, ಕಿರಣ್‌ ಕುಮಾರ್‌ ಕೊಡ್ಗಿ,ಗುರುರಾಜ್‌ ಗಂಟಿಹೊಳೆ, ಹರೀಶ್‌ ಪೂಂಜಾ, ರಾಜೇಶ್‌ ನಾಯ್ಕ, ಎಮ್‌.ಎಲ್.‌ಸಿ ಧನಂಜಯ್‌ ಸರ್ಜಿ, ಸಂಸದ ಶ್ರೀನಿವಾಸ ಪೂಜಾರಿ, ಲಾಲಾಜಿ ಆರ್‌ ಮೆಂಡನ್‌, ಮಟ್ಟಾರು ರತ್ನಾಕರ ಹೆಗ್ಡೆ, ಶಿಲ್ಪಾ ಸುವರ್ಣ ಕಾಪು, ಗೀತಾಂಜಲಿ ಸುವರ್ಣ ಕಟಪಾಡಿ, ನಂದಳಿಕೆ ಶ್ರೀಕಾಂತ್‌ ಭಟ್‌, ಶುಭಕರ ಶೆಟ್ಟಿ, ಸಂದೀಪ್‌ ಶೆಟ್ಟಿ, ಜಿಯಾನಂದ ಹೆಗ್ಡೆ ಬೈರಂಪಳ್ಳಿ, ವೀಣಾ ಶೆಟ್ಟಿ ಉಡುಪಿ, ಸಾಯಿಶ ಸುಧಾಕರ ಶೆಟ್ಟಿ ಪೆರ್ಡೂರು, ಬೆಳಪು ದೇವಿಪ್ರಸಾದ್‌ ಶೆಟ್ಟಿ,ಕುತ್ಯಾರು ನವೀನ್‌ ಶೆಟ್ಟಿ, ಶ್ರೀನಿಧಿ ಹೆಗ್ಡೆ ಉಡುಪಿ, ಹರಿಕೃಷ್ಣ ಬಂಟ್ವಾಳ, ರವೀಂದ್ರ ಮಡಿವಾಳ್‌ ಕಾರ್ಕಳ, ಅಂತೋನಿ ಡಿಸೋಜಾ ನಕ್ರೆ, ವಿಜಯ್‌ ಕುಮಾರ್‌ ಕಂಗಿನ ಮನೆ ಹೊಸ್ಮಾರ್‌, ಶ್ಯಾಮಲಾ ಕುಂದರ್‌ ಹಿರಿಯಡ್ಕ, ಲೋಕೇಶ್‌ ಶೆಟ್ಟಿ ಕಾರ್ಕಳ, ಮೋಹನ್‌ ಭಟ್‌ ಹಿರಿಯಡ್ಕ, ದಿಲ್ಲೇಶ್‌ ಶೆಟ್ಟಿ ಕುಕ್ಕೆಹಳ್ಳಿ, ಶಾಂತಾರಾಮ ಶೆಟ್ಟಿ ರಾಜೀವನಗರ, ರವೀಂದ್ರ ನಾಯ್ಕ ಕುಕ್ಕುದಕಟ್ಟೆ , ಗೋಪಾಲ ಕೃಷ್ಣ ಮಟ್ಟು, ಸುಭಾಷ್‌ ಬಲ್ಲಾಳ್‌ ಕಟಪಾಡಿ, ಶಿವಪುನಾರ್‌ ಹಿರೇಬೆಟ್ಟು, ಮೋಹನ್‌ ಶೆಟ್ಟಿ ಕಬ್ಯಾಡಿ, ಕೃಷ್ಣ ಕುಲಾಲ್‌ ವರ್ವಾಡಿ ಸೇರಿ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article