ರಂಜನಿ ಮೆಮೋರಿಯಲ್ ಟ್ರಸ್ಟ್ ಮತ್ತು ಸುಘೋಷ ಉಡುಪಿ ವತಿಯಿಂದ ಆಯೋಜಿಸಲ್ಪಟ್ಟ ವೀಣಾ ಕಚೇರಿಯು ಉಡುಪಿ ನಗರದಲ್ಲಿರುವ ಯಕ್ಷಗಾನ ಕಲಾರಂಗದ ಇನ್ಫೋಸಿಸ್ ಹವಾನಿಯಂತ್ರಿತ ಸಭಾಂಗಣದಲ್ಲಿ ಜರಗಿತು.ಖ್ಯಾತ ವೀಣಾ ಪಟು ಚೆನ್ನೈಯ ರಮಣ ಬಾಲಚಂದ್ರ ಮತ್ತು ಮೃದಂಗದಲ್ಲಿ ಪತ್ರಿ ಸತೀಶ್ ಕುಮಾರ್ ಚೆನ್ನೈ ಸಹಕಾರದೊಂದಿಗೆ ಸುಮಾರು ಮೂರು ಗಂಟೆಗಳ ಕಾಲ ಕಚೇರಿಯನ್ನು ನಡೆಸಿದರು.