ವಿಶ್ವ ಮಹಿಳಾ ದಿನಾಚರಣೆ ಸಾಧಕ ಸ್ತ್ರೀ ಪುರಸ್ಕಾರಕ್ಕೆ ಅನಿತಾ ಸಿಕ್ವೇರಾ ಆಯ್ಕೆ
Saturday, March 07, 2026
ಕೋಟ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ (ರಿ.) ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಅಮೃತೇಶ್ವರಿ ಮಹಿಳಾ ಮೀನುಗಾರರ ಸಹಕಾರಿ ಸಂಘ ಕೋಟ, ನೆನಪು ಮತ್ತು ಉಸಿರು ಕೋಟ ವತಿಯಿಂದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ ನಲ್ಲಿ ಕೊಡಮಾಡುವ 2026ನೇ ಸಾಲಿನ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಡಾ. ಶಿವರಾಮ ಕಾರಂತ ಸಾಧಕ ಸ್ತ್ರೀ ಪುರಸ್ಕಾರಕ್ಕೆ ಬರಹಗಾರ್ತಿ, ಕವಯತ್ರಿ ಅನಿತಾ ಸಿಕ್ವೇರಾ ಉಡುಪಿ ಇವರು ಆಯ್ಕೆಯಾಗಿದ್ದಾರೆ.
ಸುಮಾರು ಮೂವತ್ತು ವರ್ಷಗಳಿಂದ ಸಾಹಿತ್ಯ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಅನಿತಾ ಸಿಕ್ವೇರಾ ಇವರ ಕತೆ, ಕವನಗಳು ಹೆಸರಾಂತ ಪತ್ರಿಕೆಗಳಲ್ಲಿ ಹಾಗೂ ಆಕಾಶವಾಣಿಯಲ್ಲೂ ಪ್ರಸಾರಗೊಂಡಿವೆ. ಖಾಸಗಿ ಟಿವಿ ಚಾನಲ್‌ಗಳಲ್ಲಿ ನಿರೂಪಕಿ ಹಾಗೂ ವಾರ್ತಾವಾಚಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಎರಡು ಕಥಾ ಸಂಕಲನಗಳು ಪ್ರಕಟಗೊಂಡಿವೆ. ಇನ್ನು ಕೆಲವೊಂದು ಕೃತಿಗಳನ್ನು ಹೊರತರುವ ನಿರೀಕ್ಷೆಯಲ್ಲಿದ್ದಾರೆ.
ಡಾ. ಶಿವರಾಮ ಕಾರಂತ ಸಾಧಕ ಸ್ತ್ರೀ ಪುರಸ್ಕಾರವನ್ನು ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ಮಾರ್ಚ್15 ರಂದು ಅಪರಾಹ್ನ 2 ಗಂಟೆಗೆ ಪ್ರದಾನ ಮಾಡಲಾಗುವುದೆಂದು ಡಾ. ಶಿವರಾಮ ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷರಾದ ಆನಂದ ಸಿ ಕುಂದರ್, ಕಾರ್ಯಾದರ್ಶಿಯಾದ ನರೇಂದ್ರ ಕುಮಾರ್ ಕೋಟ, ಪಂಚಾಯತ್ ಪಿಡಿಓ ರವೀಂದ್ರ ರಾವ್ ಕಾರ್ಯದರ್ಶಿ ಸುಮತಿ ಅಂಚನ್, ಕಾರ್ಯಕ್ರಮದ ನಿರ್ದೇಶಕರಾದ ಸುಶೀಲ ಸೋಮಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.