ಇರಾನ್-ಇಸ್ರೇಲ್ ಸಂಘರ್ಷ; ಮಂಗಳೂರು ಏರ್ ಪೋರ್ಟ್ ನಿಂದ ಹೊರಡಬೇಕಿದ ವಿಮಾನ ಸಂಚಾರ ರದ್ದು
ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಹಾಗೂ ವಾಯುಪ್ರದೇಶದ ನಿರ್ಬಂಧಗಳಿಂದಾಗಿ ಮಾರ್ಚ್ 7 ರಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಬೇಕಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ನ ಎಲ್ಲಾ ನಿಗದಿತ ಅಂತರರಾಷ್ಟ್ರೀಯ ವಿಮಾನಗಳನ್ನು ರದ್ದುಗೊಳಿಸಲಾಗಿದೆ.
ಇರಾನ್-ಇಸ್ರೇಲ್ ಬಿಕ್ಕಟ್ಟಿನಿಂದಾಗಿ ಮಧ್ಯಪ್ರಾಚ್ಯದ ಪ್ರಮುಖ ಕಾರಿಡಾರ್‌ಗಳಲ್ಲಿ ಹೇರಲಾದ ಭದ್ರತಾ ನಿರ್ಬಂಧ ಮತ್ತು ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ದುಬೈ, ಅಬುಧಾಬಿ ಮತ್ತು ಇತರ ಗಲ್ಫ್ ವಿಮಾನ ನಿಲ್ದಾಣಗಳಂತಹ ಪ್ರಮುಖ ಕೇಂದ್ರಗಳು ಕಾರ್ಯಾಚರಣೆಯ ನಿರ್ಬಂಧ ಮಾಡಿರುವುದು ವರದಿಯಾಗಿದೆ. ಇದರಿಂದಾಗಿ ವಿಮಾನಯಾನ ಸಂಸ್ಥೆಗಳು ಸೇವೆಗಳನ್ನು ರದ್ದುಗೊಳಿಸಲು ಅಥವಾ ಮಾರ್ಗ ಬದಲಾಯಿಸಲು ಒತ್ತಾಯ ಕೇಳಿಬಂದಿದೆ.
ಭಾರತೀಯ ವಿಮಾನಯಾನ ಸಂಸ್ಥೆಗಳಿಗೂ ಸಹ ಗಣನೀಯ ಪರಿಣಾಮ ಬೀರಿದೆ. ವಾಯುಪ್ರದೇಶ ಮುಚ್ಚುವಿಕೆ ಮುಂದುವರಿದಿರುವುದರಿಂದ ಸಾವಿರಾರು ವಿಮಾನಗಳನ್ನು ರದ್ದುಗೊಳಿಸಲಾಗಿದೆ . ಇಂಡಿಗೊ ವಿಮಾನಯಾನ ಸಂಸ್ಥೆಗಳು ಮಾರ್ಚ್ 7 ರಂದು 140 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ವಿಮಾನಗಳನ್ನು ರದ್ದುಗೊಳಿಸಿವೆ. ಈ ಸಮಯದಲ್ಲಿ ತೊಂದರೆಗೊಳಗಾದ ಪ್ರಯಾಣಿಕರಿಗೆ ಸಂಪೂರ್ಣ ವಿನಾಯಿತಿ ಮತ್ತು ಮರುಪಾವತಿಯನ್ನು ನೀಡುತ್ತಿವೆ.
ವಿಮಾನಗಳಲ್ಲಿ ಟಿಕೆಟ್ ಬುಕ್ ಮಾಡಿದ ಪ್ರಯಾಣಿಕರು ಇತ್ತೀಚಿನ ವೇಳಾಪಟ್ಟಿ ನವೀಕರಣಗಳು, ಮರುಬುಕಿಂಗ್ ಆಯ್ಕೆಗಳು ಅಥವಾ ಮರುಪಾವತಿಗಳಿಗಾಗಿ ವಿಮಾನಯಾನ ಸಂಸ್ಥೆಯೊಂದಿಗೆ ಮಾಹಿತಿ ಪಡೆಯಲು ಸೂಚಿಸಲಾಗಿದೆ.