-->
 ಉಡುಪಿ ಕಥೋಲಿಕ್ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಸದಸ್ಯರ ಅಧ್ಯಯನ ಪ್ರವಾಸ

ಉಡುಪಿ ಕಥೋಲಿಕ್ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಸದಸ್ಯರ ಅಧ್ಯಯನ ಪ್ರವಾಸ


ಉಡುಪಿ ಕಥೋಲಿಕ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಇದರ ಆಡಳಿತ ಮಂಡಳಿ ಸದಸ್ಯರು ಕೊಡಗು ಡಿ.ಸಿ.ಸಿ ಬ್ಯಾಂಕಿಗೆ ಅಧ್ಯಯನ ಪ್ರವಾಸವನ್ನು ಕೈಗೊಂಡಿದ್ದಾರೆ. ಈ ಸಂದರ್ಭ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ  ಕೆ.ಪಿ.ಗಣಪತಿ ಯವರು ಎಲ್ಲರನ್ನೂ ಬರಮಾಡಿಕೊಂಡರು.


1921 ನೇ ಇಸವಿಯಂದು ಕೊಡಗಿನ ಹಿರಿಯ ಸಹಕಾರಿಗಳಾದ ರಾವ್ ಬಹದ್ದೂರ್ ಕೊಡಂದೇರ ಕುಟ್ಟಯ್ಯನವರ ಅಧ್ಯಕ್ಷತೆಯಲ್ಲಿ ಆರಂಭವಾದ ಸಂಸ್ಥೆ 106ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು, ಹಲವು ರಾಜ್ಯ ಮತ್ತು ರಾಷ್ಟಿçÃಯ ಪ್ರಶಸ್ತಿಗಳಿಗೆ ಭಾಜನವಾಗಿ 26 ಶಾಖೆಗಳನ್ನು ಹೊಂದಿದೆ. ಅದರಲ್ಲಿ 11 ಶಾಖೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಕುರಿತು ಕಳೆದ ಆರ್ಥಿಕ ವರ್ಷಾಂತ್ಯಕ್ಕೆ ರೂ.3,372.12 ಕೋಟಿ ವ್ಯವಹಾರವನ್ನು ನಡೆಸಿದೆ ಎಂದು ಕೆ.ಪಿ ಗಣಪತಿ ಅವರು  ಮಾಹಿತಿಯನ್ನು ನೀಡಿದರು. 

ಉಡುಪಿ ಕಥೋಲಿಕ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಇದರ ಅಧ್ಯಕ್ಷ ಲೂವಿಸ್ ಲೋಬೋ ಅವರು ಸಂಸ್ಥೆಯ ಕುರಿತು ಪ್ರಾಸ್ತವಿಕ ಮಾತನಾಡಿ,  ಮುಂದಿನ ಯೋಜನೆಗಳ ಕುರಿತು ತಿಳಿಸಿದರು. ನಂತರ ಕೊಡಗು ಡಿ.ಸಿ.ಸಿ ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ  ಕೆ.ಪಿ.ಗಣಪತಿ ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಮ್.ಕೆ ಬೆಳ್ಳಿಯಪ್ಪ ಇವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.ಸಂಘದ ನಿರ್ದೇಶಕರಾದ ಡಾ. ನೇರಿ ಕರ್ನೆಲಿಯೋ ರವರು ಶುಭ ಹಾರೈಸಿದರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಮ್.ಕೆ ಬೆಳ್ಳಿಯಪ್ಪರವರು ಧನ್ಯವಾದವಿತ್ತರು.

ಈ ಸಂದರ್ಭದಲ್ಲಿ ಕೊಡಗು ಡಿ.ಸಿ.ಸಿ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದ ಜಿ.ಎಂ.ಭೋಜಮ್ಮರವರು, ಶಾಖಾ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು. 

ಅಧ್ಯಯನ ಪ್ರವಾಸದ ಮೇಲುಸ್ತುವಾರಿಯನ್ನು ಉಡುಪಿ ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಇದರ ಅಧ್ಯಕ್ಷ ಲೂವಿಸ್ ಲೋಬೊ ವಹಿಸಿದ್ದರು. ತಂಡದಲ್ಲಿ ಉಪಾಧ್ಯಕ್ಷ ಜೇಮ್ಸ್ ಡಿ’ಸೋಜ, ನಿರ್ದೇಶಕರಾದ ಡಾ. ನೇರಿ ಕರ್ನೆಲಿಯೋ, ಲೋಯ್ಸೆಟ್ ಕರ್ನೆಲಿಯೋ, ರಿಚರ್ಡ್ ಡಾಯಸ್, ಮಾಕ್ಸೀಂ ಡಿ’ಸೋಜ, ಓನಿಲ್ ಡಿ’ಸೋಜ ಮತ್ತು ಜೆನಿವಿವ್ ಮಿನೇಜಸ್ ಇದ್ದರು.


 

Ads on article

Advertise in articles 1

advertising articles 2

Advertise under the article