-->
 ಸಾಮಾಜಿಕ ಕಾರ್ಯಕರ್ತೆ ಪೂರ್ಣಿಮಾ ಶೆಟ್ಟಿಗೆ 'ಮಾನವ ಹಕ್ಕುಗಳ ಸಬಲೀಕರಣ ಮಾನವೀಯ ಶ್ರೇಷ್ಠತೆ' ಪ್ರಶಸ್ತಿ

ಸಾಮಾಜಿಕ ಕಾರ್ಯಕರ್ತೆ ಪೂರ್ಣಿಮಾ ಶೆಟ್ಟಿಗೆ 'ಮಾನವ ಹಕ್ಕುಗಳ ಸಬಲೀಕರಣ ಮಾನವೀಯ ಶ್ರೇಷ್ಠತೆ' ಪ್ರಶಸ್ತಿ


ಸಾಮಾಜಿಕ ಸೇವಾ ಕಾರ್ಯಕರ್ತೆ ಹಾಗೂ 'ವಸುದೈವ ಕುಟುಂಬಕಂ' ಟ್ರಸ್ಟ್ ಉಡುಪಿ ಇದರ ಸಂಸ್ಥಾಪಕಿ ಪೂರ್ಣಿಮಾ ಶೆಟ್ಟಿ ಇವರಿಗೆ ಭಾರತ ಸರ್ಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಅನುಮೋದಿಸಿದ ಮಂತ್ರಚಿತ್ರ ಆಧ್ಯಾತ್ಮಿಕ ಚಿಕಿತ್ಸೆ ಮಂಡಳಿಯಿಂದ ಪ್ರತಿಷ್ಠಿತ 'ಮಾನವ ಹಕ್ಕುಗಳ ಸಬಲೀಕರಣ ಮತ್ತು ಮಾನವೀಯ ಶ್ರೇಷ್ಠತೆ' ಪ್ರಶಸ್ತಿಯನ್ನು ದೆಹಲಿಯಲ್ಲಿ ನೀಡಿ ಗೌರವಿಸಲಾಗಿದೆ. 

ಮಹಿಳೆಯರು, ಹಿರಿಯ ನಾಗರಿಕರು ಮತ್ತು ಹಿಂದುಳಿದ ವರ್ಗಗಳ ಸಬಲೀಕರಣಕ್ಕೆ ಪೂರ್ಣಿಮ ಶೆಟ್ಟಿ ಅವರು ತೋರುತ್ತಿರುವ ಅಚಲ ಬದ್ಧತೆ ಹಾಗೂ ಸಮಾಜದ ಏಳಿಗೆಗಾಗಿ ಅವರು ಸಲ್ಲಿಸುತ್ತಿರುವ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಈ ಮನ್ನಣೆ ನೀಡಲಾಗಿದೆ.

ತಮ್ಮ ಸಂಸ್ಥೆಯ ಮೂಲಕ ಶಿಕ್ಷಣ, ಆರೋಗ್ಯ ಮತ್ತು ಮಹಿಳಾ ಸಬಲೀಕರಣದಂತಹ ಸಮುದಾಯ ಅಭಿವೃದ್ಧಿ ಉಪಕ್ರಮಗಳನ್ನು ಮುನ್ನಡೆಸುತ್ತಿರುವ ಅವರು, ಬಡತನ ಮತ್ತು ಹಸಿವನ್ನು ನಿರ್ಮೂಲನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಂಚಿನಲ್ಲಿರುವ ಸಮುದಾಯಗಳ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಅವರು ನಡೆಸುತ್ತಿರುವ ಅವಿರತ ಶ್ರಮವು ಇಂದು ರಾಷ್ಟ್ರಮಟ್ಟದ ಗಮನ ಸೆಳೆದಿದೆ. ಅವರ ಈ ಸಾಧನೆಯನ್ನು ಹಿರಿಯ ನಾಗರಿಕರು ಹಾಗೂ ಅನಾಥಾಶ್ರಮಗಳ ಪೋಷಕರು ಸೇರಿದಂತೆ ಸಾರ್ವಜನಿಕ ವಲಯದ ಗಣ್ಯರು ಶ್ಲಾಘಿಸಿದ್ದು, ಈ ಗೌರವವು ಅವರ ಮುಂದಿನ ಸಮಾಜಮುಖಿ ಕಾರ್ಯಗಳಿಗೆ ಮತ್ತಷ್ಟು ಸ್ಫೂರ್ತಿ ನೀಡಲಿದೆ ಎಂದು ಅಭಿನಂದಿಸಿದ್ದಾರೆ.

Ads on article

Advertise in articles 1

advertising articles 2

Advertise under the article