-->
 ಅಪಘಾತದಿಂದ ಗಾಯಗೊಂಡ ದಿವ್ಯಾಂಗ ವ್ಯಕ್ತಿಯ ರಕ್ಷಣೆ (Video)

ಅಪಘಾತದಿಂದ ಗಾಯಗೊಂಡ ದಿವ್ಯಾಂಗ ವ್ಯಕ್ತಿಯ ರಕ್ಷಣೆ (Video)


ಉಡುಪಿ ನಗರದ ಕವಿ ಮುದಣ್ಣ ಮಾರ್ಗ ಬಳಿಯ ಅಲಂಕಾರ್ ಚಿತ್ರಮಂದಿರ ಎದುರು ಅಪಘಾತದಿಂದ ಬಿದ್ದು ಅಸಹಾಯಕ ಸ್ಥಿತಿಯಲ್ಲಿದ್ದ ದಿವ್ಯಾಂಗಚೇತನ ವ್ಯಕ್ತಿಯನ್ನು ಸಮಾಜಸೇವಕ ನಿತ್ಯಾನಂದ ಒಳಕಾಡುವರು ರಕ್ಷಿಸಿದ್ದಾರೆ. 

ಗಾಯಾಳು ಶಂಕರಪುರದ ಮನೋಜ್ (38ವ) ಎಂದು ತಿಳಿದು ಬಂದಿದೆ. ನಿತ್ಯಾನಂದ ಒಳಕಾಡು ಅವರು ವಿಳಾಸ ಪತ್ತೆಗೊಳಿಸಿ ಸಂಬOಧಿಕರಿಗೆ ವಿಷಯ ತಿಳಿಸಿದ್ದಾರೆ. ವ್ಯಕ್ತಿಯನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ರಸ್ತೆಯಲ್ಲಿದ್ದ ಗುಂಡಿ ತಪ್ಪಿಸುವಾಗ ತ್ರೀಚಕ್ರವಾಹನ ನಿಯಂತ್ರಣ ತಪ್ಪಿದ್ದು ಅಪಘಾತ ಸಂಭವಿಸಲು ಕಾರಣವೆಂದು ತಿಳಿದುಬಂದಿದೆ. 





 

Ads on article

Advertise in articles 1

advertising articles 2

Advertise under the article